Site icon Ullalavani

ಉಳ್ಳಾಲದಲ್ಲಿ 25ನೇ ಹನುಮ ಜಯಂತಿ ಪೂಜೆ: ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಚರಣೆ

ಉಳ್ಳಾಲ: ಮೊಗವೀರಪಟ್ಣದ ಚೆನ್ನಮರಕಾಲ ರಸ್ತೆಯ ಶ್ರೀ ವೀರಮಾರುತಿ ದೇವಾಲಯ ಮತ್ತು ವ್ಯಾಯಾಮ ಶಾಲೆ (ರಿ.) ವತಿಯಿಂದ 25ನೇ ಹನುಮ ಜಯಂತಿ ಪೂಜೆಯನ್ನು ವೈಭವದಿಂದ ಆಚರಿಸಲಾಯಿತು.


ತಂತ್ರಿವರ್ಯರಾದ ಶ್ರೀಕಾಂತ್ ಭಟ್ ಅವರ ನೇತೃತ್ವದಲ್ಲಿ ಪೂಜೆ ಕಾರ್ಯಕ್ರಮಗಳು ನೆರವೇರಿದವು. ಬೆಳಿಗ್ಗೆ 7:00 ಗಂಟೆಗೆ ಗಣಹೋಮ ಮಹಾಪೂಜೆ ನಡೆಯಿತು. ಸಂಜೆ ದೀಪ ಪ್ರಜ್ವಲನೆಯನ್ನು ಶ್ರೀಮತಿ ವಿಜೇತ ಕಿರಣ್ ಸಾಲ್ಯಾನ್ ದಂಪತಿ , ಕೃತಿನ್ ಕೆ. ಸಾಲ್ಯಾನ್, ಕ್ರಿಯಾನ್ ಕೆ. ಸಾಲ್ಯಾನ್ ಹಾಗೂ ಶ್ರೀ ಮತ್ತು ಶ್ರೀಮತಿ ರಶ್ಮಿಕ ಕೌಶಿಕ್ ಶಿವನಗರ, ಪಾಂಡೇಶ್ವರ ದಂಪತಿ ನೆರವೇರಿಸಿದರು.
ಸಂಜೆ 4:30 ರಿಂದ 8:00ರವರೆಗೆ ಶ್ರೀ ವಿಠೋಭ ಭಜನಾ ಮಂದಿರ ಮತ್ತು ಶ್ರೀ ರಾಮ ಭಜನಾ ಮಂದಿರ ಮೊಗವೀರಪಟ್ಟ, ಉಳ್ಳಾಲ ವತಿಯಿಂದ ಭಜನಾ ಸಂಕೀರ್ತನೆ ನಡೆಯಿತು. ನಂತರ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.
ಇದೇ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮವಾಗಿ ‘ನಮ್ಮ ಕಲಾವಿದೆರ್ ಬೆದ್ರ’ ಇವರಿಂದ ‘ವೈರಲ್ ವೈಶಾಲಿ’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರಾದ ಕಿಶೋರ್ ಕಾಂಚನ್, ಅಧ್ಯಕ್ಷರಾದ ಯಶವಂತ್ ಪಿ. ಅಮೀನ್, ಗುರಿಕಾರರಾದ ಸುರೇಂದ್ರ ಪುತ್ರನ್ , ಸಂಚಾಲಕ ಸುದರ್ಶನ್ ಪುತ್ರನ್ ಉಪಾಧ್ಯಕ್ಷ ಜಯಚಂದ್ರ ಅಮೀನ್, ಕೋಶಾಧಿಕಾರಿ ನಾರಾಯಣ ಸಾಲ್ಯಾನ್ ಹಾಗೂ ಪ್ರಧಾನ ಕಾರ್ಯದರ್ಶಿ ತಿಲಕ್ ಎಸ್. ಬಂಗೇರ , ಜೊತೆ ಕಾರ್ಯದರ್ಶಿಯಾಗಿ ಜೀವನ್ ಬಂಗೇರ ಹಾಗೂ ಪ್ರಧಾನ ಅರ್ಚಕರಾಗಿ ದೀಪಕ್ ಅಮೀನ್ ಉಪಸ್ಥಿತರಿದ್ದರು.

Exit mobile version