Site icon Ullalavani

ಬಾಳೆಪುಣಿಯ ಕಣಂತೂರು ಪುಷ್ಪ -ಕೇಶವರಿಗೆ ‘ ಸ್ವಚ್ಛ ಮನೆ ‘ಪ್ರಶಸ್ತಿ ಪ್ರದಾನ


ಮುಡಿಪು ;ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಸ್ವಚ್ಛ ಪರಿಸರ -ಸ್ವಚ್ಛಮನೆ ಕಾರ್ಯಕ್ರಮದ ಅಂಗವಾಗಿ ಮುಡಿಪು ಅಪ್ನಾದೇಶ್ ಸ್ವಚ್ಛತಾ ಬಳಗ ಜನಶಿಕ್ಷಣ ಟ್ರಸ್ಟ್ ವತಿಯಿಂದ ಕಣಂತೂರು ಪುಷ್ಪ -ಕೇಶವರ ಮನೆಗೆ ಸ್ವಚ್ಛ ಮನೆ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮ ಮುಡಿಪು ಜನಶಿಕ್ಷಣ ಟ್ರಸ್ಟ್ ನ ಸರ್ವೋದಯ ಸಭಾಂಗಣದಲ್ಲಿ ನಡೆಯಿತು.

ಅಪ್ನಾ ದೇಶ್ ಸ್ವಚ್ಛತಾ ಬಳಗದ ಮುಖಂಡ ರಾದ ರಮೇಶ್ ಶೇಣವ ಪ್ರಶಸ್ತಿ ವಿತರಿಸಿದರು.

ಬಳಿಕ ಮಾತನಾಡಿದ ಅವರು ಮನೆಯ ಸುತ್ತ ಹಸಿರು ಪರಿಸರ,ಪ್ರಾಣಿ ಪಕ್ಷಿಗಳ ಒಡನಾಟದ ಹವ್ಯಾಸ ನಮ್ಮ ದೈಹಿಕ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.ಈ ನಿಟ್ಟಿನಲ್ಲಿ ಸ್ವಚ್ಛ ಮನೆ ಪ್ರಶಸ್ತಿ ಇತರರಿಗೆ ಪ್ರೇರಣೆಯಾಗಲಿ ಎಂದರು.”ಸ್ವಚ್ಛ, ಪರಿಸರದ ಜೊತೆ ಗಿನ ಬದುಕು ನಮಗೆ ಮಾನಸಿಕ ನೆಮ್ಮದಿಯನ್ನು ನೀಡಿದೆ.ಮನೆಯ ಸುತ್ತ ಸಾಕಷ್ಟು ಹೂ,ಹಣ್ಣಿನ ಗಿಡಗಳು ಇರುವ ಕಾರಣ
ವಿವಿಧ ಜಾತಿಯ ಪಕ್ಷಿಗಳು ನಿರಂತರ ಭೇಟಿ ನೀಡುತ್ತವೆ.ಗಿಡಗಳನ್ನು ಬೆಳೆಸುವುದು ಅದರ ಪಾಲನೆಯಲ್ಲಿ ನಾವಿಬ್ಬರು ತೊಡಗಿಕೊಳ್ಳುವ ಚಟುವಟಿಕೆಯಲ್ಲಿ ನಮಗೆ ಒಂದು ರೀತಿಯ ಮಾನಸಿಕ ತೃಪ್ತಿ ಇದೆ. ನಮಗೆ ಬೇಕಾದ ತರಕಾರಿ ಸೊಪ್ಪು ನಾವೆ ಬೆಳೆಸುತ್ತೇವೆ, ಸಾವಯವ ಗೊಬ್ಬರ ಬಳಸುತ್ತೇವೆ,ಸ್ವಚ್ಛ ಪರಿಸರ ನಮ್ಮ ಬದುಕಿನ ಭಾಗವಾಗಿದೆ “ಎಂದು ಪ್ರಶಸ್ತಿ ಸ್ವೀಕರಿಸಿದ ಪುಷ್ಪ ಹಾಗೂ ಕೇಶವ ದಂಪತಿ ಅಭಿಪ್ರಾಯ ಪಡುತ್ತಾರೆ.
ಮುಖ್ಯ ಅತಿಥಿಯಾಗಿ ಕರ್ನಾಟಕ ರಾಜ್ಯ ಕಾರ್ಯ ನಿರತ ಪತ್ರಕರ್ತರ ಸಂಘದ
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ,ತುಳು ಸಾಹಿತಿ ಚಂದ್ರಹಾಸ ಕಣಂತೂರು ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನಶೆಟ್ಟಿ ಸ್ವಾಗತಿಸಿ ಮಾತನಾ ಡುತ್ತಾ,ಜಿಲ್ಲೆಯಲ್ಲಿ ಪ್ರಥಮವಾಗಿ ಪುಷ್ಪ- ಕೇಶವ ಅವರ ಮನೆಯನ್ನು ಸ್ವಚ್ಛ ಮನೆ ಯೆಂದು ಗುರುತಿಸಿ ಗೌರವಿಸಲಾಗಿದೆ ಈ ಅಭಿಯಾನ ಮುಂದುವರಿಯಲಿದೆ.ಸ್ವಚ್ಛ ಮನೆ ಸ್ವಚ್ಛ ಮನಸ್ಸು, ಸ್ವಚ್ಛ ಪರಿಸರ ಜನರ
ಮೂಲಕ ವ್ಯಾಪಿಸಬೇಕು,ಪರಿಸರವಸ್ನೇಹಿ ಬದುಕು ನಮ್ಮದಾಗ ಬೇಕು ಎಂದರು.
ಸಮಾರಂಭದಲ್ಲಿ ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪ ರಾಜ್ ಬಿ.ಎನ್,ಮಂಗಳೂರು ಆಕಾಶವಾಣಿ
ಯ ನಿವೃತ್ತ ಉದ್ಯೋಗಿ ಶ್ಯಾಮ್ ಭಟ್
ಅಪ್ನಾದೇಶ್ ಸ್ವಚ್ಛತಾ ಬಳಗದ ಮುಖಂಡ ರಾದ ಇಸ್ಮಾಯಿಲ್ ಕಣಂತೂರು, ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಜನಶಿಕ್ಷಣ ಟ್ರಸ್ಟ್ ನ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

Exit mobile version