ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಜನರ ಆರೋಗ್ಯಕ್ಕೆ ಒಳಿತಾಗುವ ದೃಷ್ಟಿಯಿಂದ ಕೆ.ಎಸ್.ಹೆಗ್ಡೆ ಸಹಭಾಗಿತ್ವದೊಂದಿಗೆ ಸ್ಫೂರ್ತಿ ಪಾಲಿಕ್ಲಿನಿಕ್ ಗುಣಮಟ್ಟದ ಸೇವೆಯನ್ನು ಒದಗಿಸುತ್ತಾ ಬಂದಿದ್ದು, ಇದೀಗ ಆರಂಭಗೊಂಡ ಸುಸಜ್ಜಿತ ಪ್ರಯೋಗಾಲಯ ಮತ್ತು ಫಿಸಿಯೋಥೆರಪಿ ಘಟಕವೂ ಉತ್ತಮವಾಗಿ ಕಾರ್ಯ ನಿರ್ವಹಿಸಲಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ.ಶಾಂತಾರಾಮ ಶೆಟ್ಟಿ ಹೇಳಿದರು.
ಪ್ರಯೋಗಾಲಯವನ್ನು ನಿಟ್ಟೆ ವಿ.ವಿ ಉಪಕುಲಪತಿ ಡಾ. ರಮಾನಂದ ಶೆಟ್ಟಿ ಉದ್ಘಾಟಿಸಿದರು.
ಈ ಸಂದರ್ಭ ಕೆ.ಎಸ್.ಹೆಗ್ಡೆ ವೈದ್ಯಕೀಯ ಕಾಲೇಜಿನ ಡೀನ್ ಡಾ.ಸತೀಶ್ ಕುಮಾರ್ ಭಂಡಾರಿ, ಮೆಡಿಕಲ್ ಸುರಿಟೆಂಡೆಂಟ್ ಡಾ.ಕರುಣಾ ರಮೇಶ್, ವೈಸ್ ಡೀನ್ ಡಾ.ಪ್ರಕಾಶ್, ಕ್ಷೇಮದ ಕುಲಸಚಿವ ಡಾ.ಜೆ.ಪಿ ಶೆಟ್ಟಿ, ಸ್ಫೂರ್ತಿ ಪಾಲಿಕ್ಲಿನಿಕ್‍ನ ಆಡಳಿತ ನಿರ್ದೇಶಕ ಡಾ. ವಿಕ್ರಂ ಶೆಟ್ಟಿ, ಮಕ್ಕಳ ತಜ್ಞ ಡಾ.ಕಿಶನ್ ಆಳ್ವ, ಕಣ್ಣಿನ ತಜ್ಞ ಡಾ.ವಸಂತಿ, ಫಿಸಿಷಿಯನ್ ಡಾ.ಸುರೇಶ್.ಜಿ, ಡಾ.ಅಭಿಜಿತ್ ಶೆಟ್ಟಿ, ಡಾ.ಶ್ರೀನಾಥ್ ಕಾಮತ್, ಡಾ.ಶ್ರೀನಿವಾಸ್ ಭಟ್, ಡಾ.ಗಿರೀಶ್, ಡಾ.ದೀಪಾ ಕಣಗಲ್, ಡಾ.ಸಿದ್ಧಾರ್ಥ ಶೆಟ್ಟಿ, ಡಾ.ಆನಂದ ಬಂಗೇರ, ಡಾ.ಕಿಶನ್ ಪ್ರಸಾದ್, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಜಾಯ್ನರ್ ಮಿಷ್ಕತ್ ಉಪಸ್ಥಿತರಿದ್ದರು.