Site icon Ullalavani

ಕೊಣಾಜೆ ಪ್ರೌ.ಶಾಲೆಯ ಎಸ್‌ಡಿಎಂಸಿ ಸದಸ್ಯರಾಗಿದ್ದ ಸೂಫಿಕುಂಞ ಕೆ.ಎಂ. ಕೋಡಿಜಾಲ್ (63) ನಿಧನ

ಕೊಣಾಜೆ: ಕೊಣಾಜೆ ಪ್ರೌಢಶಾಲೆಯ ಎಸ್‌ಡಿಎಂಸಿ ಹಾಗೂ ಕೋಡಿಜಾಲ್ ಜುಮಾ ಮಸೀದಿಯ ಆಡಳಿತ ಸಮಿತಿ ಸದಸ್ಯರಾಗಿದ್ದ ಕೊಣಾಜೆ ಗ್ರಾಮದ ಕೋಡಿಜಾಲ್ ನಿವಾಸಿ ಸೂಫಿಕುಂಞ ಕೆ.ಎಂ. ಕೋಡಿಜಾಲ್(63) ಅನಾರೋಗ್ಯ ಸಮಸ್ಯೆಯಿಂದ ನಿಧನರಾಗಿದ್ದಾರೆ.

ಇವರ ಪುತ್ರಿ ಫಾತಿಮಾ ಶಿಝಾ ಕೊಣಾಜೆ ಪ್ರೌಢಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಆಕೆ ಪರೀಕ್ಷೆಗೆ ತೆರಳಿದ ಬಳಿಕ ಮೃತದೇಹವನ್ನು ಮನೆಗೆ ತರಲಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕಿ ಮೀನಾ ಗಾಂವ್ಕರ್ ಅವರು ಶಿಝಾ ಪರೀಕ್ಷೆ ಬರೆದ ಕೂಡಲೇ ಮನೆಗೆ ಕಳುಹಿಸಿ, ಮಾನವೀಯತೆ ಮೆರೆದಿದ್ದಾರೆ. ತಂದೆ ಆಗಲಿಕೆ ಸುದ್ದಿ ತಿಳಿದು ಅಘಾತಗೊಂಡಿದ್ದಳು.

ಕುಂಞ ಅವರು ಹೃದಯ ಸಂಬAಧಿ ಸಮಸ್ಯೆಯಿಂದ ನಾಲ್ಕು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಮಂಗಳವಾರ ನಸುಕಿನ ಜಾವ ಮೃತಪಟ್ಟಿದ್ದಾರೆ.

ಮೃತರು ಪತ್ನಿ, ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Exit mobile version