Site icon Ullalavani

ಹಿಂದೂ ಯುವಸೇನೆ ಕೆರೆಬೈಲ್ ಕೊರಗಜ್ಜ ಶಾಖೆಯ ಬೆಳ್ಳಿ ಹಬ್ಬ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆ

ಉಳ್ಳಾಲ; ಹಿಂದೂ ಯುವಸೇನೆ ಕೆರೆಬೈಲ್ ಕೊರಗಜ್ಜ ಶಾಖೆಯ 25ನೇ ವಾರ್ಷಿಕೋತ್ಸವದ ಬೆಳ್ಳಿಹಬ್ಬ ಹಾಗೂ ಬಿಸು ಪರ್ಬದ ಪ್ರಯುಕ್ತ ಕೆರೆಬೈಲಿನ ನಾಗರಕ್ತೇಶ್ವರಿ ಸಾನಿಧ್ಯದ ಬಳಿಯ ಮೈದಾನದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಿತು.

ಆಟೋಟ ಸ್ಫರ್ದೆಕ್ಕೆ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯದ ಸಂಯೋಜಕರಾದ ಜಯರಾಮ್ ಚೆಂಬುಗುಡ್ಡೆ ಅವರು ಚಾಲನೆ ನೀಡಿದರು.

ಹಿಂದೂ ಯುವಸೇನೆ ಕೇಂದ್ರೀಯ ಮಂಡಳಿಯ ಗೌರವಾಧ್ಯಕ್ಷರಾದ ಭಾಸ್ಕರಚಂದ್ರ ಶೆಟ್ಟಿ,ಅಧ್ಯಕ್ಷರಾದ ಯಶೋಧರ ಚೌಟ,ಸಂಘಟನಾ ಕಾರ್ಯದರ್ಶಿ ನವೀನ್ ಚಂದ್ರ ಎಕ್ಕೂರು,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಅನುಸೂಯ,ಧರ್ಮ ಸಾಕ್ಷಿ ಒಕ್ಕೂಟದ ಅರುಣ್,ಕೆರೆಬೈಲ್ ಕೊರಗ ತನಿಯ ಸೇವಾ ಸಮಿತಿಯ ಕೋಶಾಧಿಕಾರಿ ರಾಜ ಮೆಸ್ಕಾಂ,ಹಿAದೂ ಯುವಸೇನೆ ಕೊರಗಜ್ಜ ಶಾಖೆಯ ಅಧ್ಯಕ್ಷರಾದ ನಾರಾಯಣ.ಬಿ ಹಾಗೂ ಗೌರವಾಧ್ಯಕ್ಷರಾದ ಲೋಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಮಕ್ಕಳು,ಮಹಿಳೆಯರು ಹಾಗೂ ಪುರುಷರಿಗಾಗಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು. ಮಹಿಳೆಯರಿಗಾಗಿ ಆಯೋಜಿಸಲಾದ ಬೀಡಿ ಕಟ್ಟುವ ಸ್ಪರ್ಧೆಯು ವಿಶೇಷ ಆಕರ್ಷಣೆಯಾಗಿತ್ತು. ದಿನೇಶ್ ಶೆಟ್ಟಿ ಚೆಂಬುಗುಡ್ಡೆ ಕಾರ್ಯಕ್ರಮ ನಿರೂಪಿಸಿದರು.

ಹಿಂದೂ ಯುವಸೇನೆ ಕೆರೆಬೈಲ್ ಕೊರಗಜ್ಜ ಶಾಖೆಯ ಇಪ್ತತ್ತೈದನೇ ವಾರ್ಷಿಕೋತ್ಸವದ ಅಂಗವಾಗಿ ಏಪ್ರಿಲ್ ೪ರಂದು ಬೃಹತ್ ರಕ್ತದಾನ ಶಿಬಿರ,ಏಪ್ರಿಲ್ ೬ರಿಂದ ೧೨ರವರೆಗೆ ಸಂಧ್ಯಾ ಭಜನೆ,ಏಪ್ರಿಲ್ ೧೩ರಂದು ಸಾಂಸ್ಕೃತಿಕ ಕಾರ್ಯಕ್ರಮ,ಆಶ್ಲೇಷ ಬಲಿ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರುವುದು.ಏಪ್ರಿಲ್ ೧೪ರಂದು ಕುಣಿತ ಭಜನೆ,ದಾರ್ಮಿಕ ಸಭಾ ಕಾರ್ಯಕ್ರಮ ಮತ್ತು `ಶಿವಧೂತೆ ಗುಳಿಗೆ’ ತುಳು ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆಯೆಂದು ಹಿಂದೂ ಯುವ ಸೇನೆ ಕೊರಗಜ್ಜ ಶಾಖೆಯ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಚೆಂಬುಗುಡ್ಡೆ ತಿಳಿಸಿದ್ದಾರೆ.

Exit mobile version