Site icon Ullalavani

ಉಳ್ಳಾಲಬೈಲ್‌ನಲ್ಲಿ ಮಕ್ಕಳಿಗಾಗಿ ವಿಶೇಷ ಸಮರ್ ಕ್ಯಾಂಪ್ ಆಯೋಜನೆ

ಉಳ್ಳಾಲ; ಮಲ್ಲಿಕಾ ಅವರ ನೇತೃತ್ವದ ದಕ್ಷ್ ಪ್ಲೇ ಸ್ಕೂಲ್ ವತಿಯಿಂದ ಉಳ್ಳಾಲ ಬೈಲ್‌ನಲ್ಲಿ ಮಕ್ಕಳಿಗಾಗಿ ವಿಶೇಷ ಸಮರ್ ಕ್ಯಾಂಪ್ ನಡೆಯುತ್ತಿದೆ.

ಬೇಸಿಗೆ ರಜಾದಿನಗಳಲ್ಲಿ ಮಕ್ಕಳಿಗೆ ಸೃಜನಾತ್ಮಕ ಹಾಗೂ ಶೈಕ್ಷಣಿಕ ವಾತಾವರಣ ಒದಗಿಸಿ ಅವರ ಪ್ರತಿಭೆ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಸಮರ್ ಕ್ಯಾಂಪ್ ಆಯೋಜಿಸಲಾಗಿದೆ.

ಮಕ್ಕಳಿಗೆ ಮನರಂಜನೆಯ ಜೊತೆಗೆ ಬುದ್ಧಿವರ್ಧಕ ಚಟುವಟಿಕೆಗಳನ್ನು ಕಲಿಸುವ ವ್ಯವಸ್ಥೆಯೂ ಲಭ್ಯವಿದೆ. ಅದಲ್ಲದೇ ವಾಹನದ ಸೌಲಭ್ಯವೂ ಇದೆ. ಮಕ್ಕಳು ಹೆಚ್ಚು ಸ್ಮಾರ್ಟ್ ಆಗಿ, ಖುಷಿಯಿಂದ ಕಾಲ ಕಳೆಯಲು ಇದು ಉತ್ತಮ ಅವಕಾಶವಾಗಿದ್ದು, ಪೋಷಕರು ಆರಾಮದಾಯಕವಾಗಿ ಮಕ್ಕಳನ್ನು ಈ ಕ್ಯಾಂಪ್‌ಗೆ ಸೇರಿಸಬಹುದಾಗಿದೆ.

ಏಪ್ರಿಲ್, ಮಾರ್ಚ್ ಎರಡು ತಿಂಗಳ ಕ್ಯಾಂಪಿನಲ್ಲಿ ಚಿತ್ರಕಲೆ, ಹಸ್ತಕಲೆ, ಕರಾಟೆ, ಯೋಗ, ಮೆಹೆಂದಿ, ತಬಲಾ, ವೆಸ್ಟರ್ನ್ ಡ್ಯಾನ್ಸ್ ಸೇರಿದಂತೆ ವಿವಿಧ ಸೃಜನಾತ್ಮಕ ಚಟುವಟಿಕೆಗಳ ಜೊತೆಗೆ ಅಥ್ಲೆಟಿಕ್ಸ್ ಟ್ರೆöÊನಿಂಗ್ ನೀಡಲಾಗುತ್ತದೆ. ಈ ಶಿಬಿರದ ಶುಲ್ಕ 750 ಆಗಿದೆ.

ಇನ್ನು ಇಲ್ಲಿ ಡೇ ಕೇರ್ ಸೌಲಭ್ಯವೂ ಲಭ್ಯವಿದ್ದು, ಹಾಫ್ ಡೇ ಹಾಗೂ ಫುಲ್ ಡೇ ಆಯ್ಕೆಗಳು ಕೂಡ ಇವೆ. ಹೆಚ್ಚಿನ ಮಾಹಿತಿಗಾಗಿ 9113853728 ಸಂಪರ್ಕಿಸಬಹುದಾಗಿದೆ.

Exit mobile version