Site icon Ullalavani

ಕಿನ್ಯ; ವಾರ್ಷಿಕ ನೇಮೋತ್ಸವದ ಅಂಗವಾಗಿ ಭಂಡಾರ ಮನೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ

ಕಿನ್ಯ ಬೆಳರಿಂಗೆ ಭಂಡಾರ ಮನೆ ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ವಾರ್ಷಿಕ ನೇಮೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ಭಂಡಾರ ಮನೆಯಲ್ಲಿ ನಡೆಯಿತು.


ಟ್ರಸ್ಟಿನ ಗೌರವಾಧ್ಯಕ್ಷ ಕೆ.ಟಿ ಸುವರ್ಣ ಸಭೆಯ ಅಧ್ಯಕ್ಷತೆ ವಹಿಸಿ, ದೀಪ ಬೆಳಗಿಸಿ, ದೈವ ದೇವರ ಸೇವೆ ಮಾಡುವುದು ಅತ್ಯಂತ ಪುಣ್ಯದ ಕೆಲಸ, ಆದರೆ ನಮ್ಮ ಮನೆಯಲ್ಲಿ ತಂದೆ ತಾಯಿ ಹಿರಿಯರನ್ನು ಗೌರವಿಸದೆ ನೋಡದೆ, ದೈವ ದೇವರ ಸೇವೆ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ, ನಾವು ಗುರು ಹಿರಿಯರನ್ನು ಗೌರವಿಸಿ ಮಾಡುವ ಸೇವೆ ಎಲ್ಲಕ್ಕಿಂತ ದೊಡ್ಡದು ಎಂದು ತಿಳಿಸಿದರು.

ದೇವರು ಎಲ್ಲಿಯೂ ಇದ್ದಾನೆ, ಹಾಗಾಗಿ ಪ್ರತ್ಯೇಕವಾಗಿ ದೇವಸ್ಥಾನಕ್ಕೆ ಯಾಕೆ ಹೋಗಬೇಕು, ಎನ್ನುವವರು ಇದ್ದಾರೆ, ಗಾಳಿ ಎಲ್ಲಾ ಕಡೆ ಇದೆ, ಆದರೆ ಅತ್ಯಂತ ಸೆಕೆ ಆದಾಗ ನಾವು ಫ್ಯಾನಿನ ಗಾಳಿಯನ್ನು ಹುಡುಕಿಕೊಂಡು ಅದರ ಹತ್ತಿರ ಹೋಗುತ್ತೇವೆ ಹಾಗೆಯೆ ದೇವರು ಕೂಡ ಎಲ್ಲೆಲ್ಲಿ ಇದ್ದರೂ, ಮನಸ್ಸಿಗೆ ಶಾಂತಿ ನೆಮ್ಮದಿ ಬೇಕಾದಾಗ ನಾವು ಪವಿತ್ರ ಕ್ಷೇತ್ರಗಳಿಗೆ ಹೋಗುತ್ತೇವೆ, ಮನುಷ್ಯರಲ್ಲಿ ಸಂಪತ್ತು ಎಷ್ಟು ಇರಬಹುದು, ಆದರೆ ಹೃದಯ ಶ್ರೀಮಂತಿಗೆ ಬೇಕು . ಅದುವೇ ಸಮಾಜಕ್ಕೆ ಮಾದರಿ ಎಂದು ಖ್ಯಾತ ಯಕ್ಷಗಾನ ತಾಳಮದ್ದಳೆ ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ ಧಾರ್ಮಿಕ ಸಂದೇಶ ನೀಡಿದರು.

ತಲಪಾಡಿ ದೇವಿನಗರ ಶ್ರೀ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಮೋಹನ್‌ದಾಸ್ ಅತಿಥಿಯಾಗಿ ಪಾಲ್ಲೊಂಡು ನಮ್ಮ ಮಕ್ಕಳ ಸರಿ ತಪ್ಪುಗಳನ್ನು ತಿದ್ದಿ, ಅವರನ್ನು ಸುಸಂಸ್ಕೃತರನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಶ್ರೀ ಮಲರಾಯ ಧೂಮಾವತಿ ಬಂಟ ದೈವಗಳ ಚಾರಿಟೇಬಲ್ ಟ್ರಸ್ಟ್ ಭಂಡಾರ ಮನೆ ಬೆಳರಿಂಗೆ ಇದರ ಟ್ರಸ್ಟಿಗಳು ಎ.ಜೆ ಶೇಖರ್, ಬೆಳರಿಂಗೆ ಬಂಗೇರ ಕುಟುಂಬದ ಪ್ರಧಾನ ಕಾರ್ಯದರ್ಶಿ ಟ್ರಸ್ಟಿ ನಾರಾಯಣ ಪೂಜಾರಿ ಉರ್ವ, ಸೇವಾ ಸಮಿತಿ ಅಧ್ಯಕ್ಷ ಯಶವಂತ ಬೆಳರಿಂಗೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಭಂಡಾರ ಮನೆ ಆವರಣಕ್ಕೆ ಇಂಟರ್ ಲಾಕ್ ಅಳವಡಿಕೆ ನೀಡಿ ಸಹಕರಿಸಿದ ಟ್ರಸ್ಟ್ ಕೆ.ಪಿ ಸುರೇಶ್ ಅವರನ್ನು ಈ ಸಂದರ್ಭ ಸಂಮಾನಿಸಲಾಯಿತು. ಕರ್ನಾಟಕ ಯಕ್ಷಗಾನ ಅಕಾಡಮಿ ಸದಸ್ಯ ಕ್ಷೇತ್ರದ ಟ್ರಸ್ಟಿ ಕೃಷ್ಣಪ್ಪ ಕಿನ್ಯ ಇವರನ್ನು ಅಭಿನಂದಿಸಲಾಯಿತು.
ಪ್ರಣಮ್, ಮಾನ್ವಿ, ಸಮ್ಮಿಕ, ಪ್ರಾರ್ಥನೆ ಗೈದರು, ಭಂಡಾರ ಮನೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು ಬಾಬು ಶ್ರೀಶಾಸ್ತಾ ಕಿನ್ಯ ಸ್ವಾಗತಿಸಿ ಪ್ರಾಸ್ತವನೆ ಗೈದರು, ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಟ್ರಸ್ಟ್ ಕೃಷ್ಣಪ್ಪ ಕಿನ್ಯ ವಂದಿಸಿದರು,

Exit mobile version