Site icon Ullalavani

ಬಾಳೆಪುಣಿಯಲ್ಲಿ ಫತ್ಹೇ ಮುಬಾರಕ್- ಮದ್ರಸಾ ಪ್ರಾರಂಭೋತ್ಸವ

ಬಾಳೆಪುಣಿ: ಫತ್ಹೇ ಮುಬಾರಕ್ ಮದ್ರಸಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಗಣ್ಯರು, ಧಾರ್ಮಿಕ ಮುಖಂಡರು, ಪೋಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದರು.

ಕಾರ್ಯಕ್ರಮವು ದುಆದೊಂದಿಗೆ ಆರಂಭಗೊಂಡಿತು.ನಂತರ ಮದ್ರಸಾ ಸದರ್ ಉಸ್ತಾದ್ ಹಾರಿಸ್ ಹನೀಫಿ ಅಲ್ ಫುರ್ಖಾನಿ ಯವರು ಶಿಕ್ಷಣದ ಮಹತ್ವವನ್ನು ವಿವರಿಸಿದರು. ಇಸ್ಲಾಮಿಕ್ ಶಿಕ್ಷಣವು ಮಕ್ಕಳಲ್ಲಿ ಶಿಸ್ತು, ಸತ್ಸಂಸ್ಕಾರ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಲು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟರು.

ಜಮಾಅತ್ ಅಧ್ಯಕ್ಷರಾದ ಮೊಯ್ದಿನ್ ಹಾಜಿ ಯವರು ಈ ಮದ್ರಸ ಸ್ಥಳೀಯ ಮಕ್ಕಳಿಗೆ ಉತ್ತಮ ಧಾರ್ಮಿಕ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಆರಂಭಿಸಲಾಗಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ಹೊಂದಿ ಸಮಾಜಕ್ಕೆ ಸೇವೆ ಮಾಡುವಂತೆ ಬೆಳೆಯಬೇಕು ಎಂದು ಆಶಿಸಿದರು.

ಮುಅಲ್ಲಿಮರಾದ ಮುಹಮ್ಮದ್ ಮದನಿ ಕಜೆ ಕಾರ್ಯಕ್ರಮ ಉದ್ಘಾಟಿಸಿ ಉಮರ್ ಹಾಜಿ ಹಾಗೂ ಸ‌ಹ ಅಧ್ಯಾಪಕರಾದ ಸಿದ್ದೀಕ್ ಸ‌ಅದಿ ಅಲ್ ಹಾದಿ ಆಶಂಸೆ ಭಾಷಣ ಮಾಡಿದರು.ಸಹ ಅಧ್ಯಾಪಕರಾದ ಸ್ವಾದಿಕ್ ಸಖಾಫಿ, ಸಫ್ವಾನ್ ಸುಲ್ತಾನಿ ಅಲ್ ಫುರ್ಖಾನಿ ಉಪಸ್ಥಿತರಿದ್ದರು.

ಮದ್ರಸಾ ಹಳೆ ವಿದ್ಯಾರ್ಥಿಗಳ ವತಿಯಿಂದ ವಿದ್ಯಾರ್ಥಿಗಳಿಗೆ ಕಿತಾಬ್ ವಿತರಣೆ ನಡೆಸಲಾಯಿತು.
ಕಾರ್ಯಕ್ರಮದ ಕೊನೆಯಲ್ಲಿ ಸಿಹಿ ತಿಂಡಿ ವಿತರಿಸಲಾಯಿತು.

Exit mobile version