ಉಳ್ಳಾಲ: ತೊಕ್ಕೊಟ್ಟು ಕಾಪಿಕಾಡುವಿನ ಉಮಾಪುರಿಯ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಬುಧವಾರದಂದು ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿವರ್ಯರ ನೇತೃತ್ವದಲ್ಲಿ ಉಮಾಮಹೇಶ್ವರಿ ಅಮ್ಮನವರಿಗೆ ಧೃಢ ಕಲಶಾಭಿಷೇಕ ನಡೆಯಿತು.
ಮಧ್ಯಾಹ್ನ ಮಹಾಪೂಜೆ ನೆರವೇರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕರಾದ ಪರಮೇಶ್ವರ ಜೋಷಿ,ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್ ಮತ್ತು ಪೂರ್ಣಿಮಾ ಶೇಖರ್ ದಂಪತಿ,ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ.ಅತ್ತಾವರ,ಕೋಶಾಧಿಕಾರಿ ಟಿ.ರಘುರಾಮ ಶೆಟ್ಟಿ,ಮೊಕ್ತೇಸರರುಗಳಾದ ಈಶ್ವರ್ ಉಳ್ಳಾಲ್,ನಿರ್ಮಲ ಕುಂಞಬು,ಮಹಾಲಿಂಗ,ಡಾ.ರಾಮಕೃಷ್ಣ ಶೆಟ್ಟಿ,ಕೂಸಪ್ಪ ಗಟ್ಟಿ,ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಸುರೇಶ್ ಭಟ್ನಗರ,ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಾಪಿಕಾಡು,ಉಮಾಮಹೇಶ್ವರಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಸುರೇಂದ್ರ ನಾಯಕ್,ಅಧ್ಯಕ್ಷರಾದ ದಿನೇಶ್ ರೈ ಕಳ್ಳಿಗೆ,ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್,ಪ್ರಮುಖರಾದ ಆನಂದ ಶೆಟ್ಟಿ ಭಟ್ನಗರ,ಸಂಜೀವ ಶೆಟ್ಟಿ ಪಿಲಾರ್,ಮೋಹನ್ ದಾಸ್ ಕಾಪಿಕಾಡ್,ಶಿವರಾಮ್ ಕಾಪಿಕಾಡು,ಚರಣ್ ಮೊದಲಾದವರು ಉಪಸ್ಥಿತರಿದ್ದರು.