Site icon Ullalavani

ಕಾಪಿಕಾಡು ಶ್ರೀ ಉಮಾಮಹೇಶ್ವರಿ ಕ್ಷೇತ್ರಕ್ಕೆ ಕರ್ನಾಟಕ ಬ್ಯಾಂಕ್ ವತಿಯಿಂದ ವಾಟರ್ ಡಿಸ್ಪೆನ್ಸರ್ ಕೊಡುಗೆ


ಉಳ್ಳಾಲ:ಸಾಮಾಜಿಕ ಕಳಕಳಿಯ ಉದ್ದೇಶದಿಂದ ಎಲ್ಲಾ ಹಣಕಾಸು ಸಂಸ್ಥೆಗಳು,ಖಾಸಗಿ ಸಂಸ್ಥೆಗಳು ಸಹ ಸಿಎಸ್ ಆರ್ ಕಾನೂನಿನಡಿ ತಮ್ಮ ವ್ಯವಹಾರದ ಲಾಭಾಂಶದ ಒಂದಂಶವನ್ನು ಸಮಾಜಕ್ಕೆ ನೀಡುವುದು ಕಡ್ಡಾಯ ಜವಬ್ದಾರಿಯಾಗಿದೆ.ಕರ್ನಾಟಕ ಬ್ಯಾಂಕ್ ಸ್ಥಾಪನೆಗೊಂಡು 102 ವರುಷಗಳಾಗಿದ್ದು, ಸಿಎಸ್ ಆರ್ ಕಾನೂನು ಜಾರಿಯಾಗುವ ಮೊದಲೇ ಪ್ರತೀ ವರುಷವೂ ತನ್ನ ಲಾಭಾಂಶದ ಸ್ವಲ್ಪ ಭಾಗವನ್ನ ಸಮಾಜಕ್ಕೆ ವಿನಿಯೋಗಿಸುತ್ತಾ ಬಂದಿದೆಯೆಂದು ಕರ್ನಾಟಕ ಬ್ಯಾಂಕ್ ತೊಕ್ಕೊಟ್ಟು ಶಾಖಾ ಪ್ರಬಂಧಕರಾದ ದೀಪಕ್ ಎಸ್.ಜಿ ಹೇಳಿದರು.

ತೊಕ್ಕೊಟ್ಟು ಕಾಪಿಕಾಡುವಿನ ಉಮಾಪುರಿ ಶ್ರೀ ಉಮಾಮಹೇಶ್ವರಿ ಕ್ಷೇತ್ರಕ್ಕೆ ಕರ್ನಾಟಕ ಬ್ಯಾಂಕಿನ ಸಿಎಸ್ ಆರ್ ನಿಧಿಯಡಿ ನೀಡಲಾದ ವಾಟರ್ ಡಿಸ್ಪೆನ್ಸರನ್ನು(ನೀರಿನ ವಿತರಕ ಯಂತ್ರ)ಬುಧವಾರದಂದು ಉಮಾಮಹೇಶ್ವರಿ ದೇವಸ್ಥಾನದಲ್ಲಿ ನಡೆದ ಧೃಢ ಕಲಶೋತ್ಸವ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.

ವಿಶೇಷವಾಗಿ ಶಿಕ್ಷಣ,ಸಂಸ್ಕೃತಿ,ಕುಡಿಯುವ ನೀರಿನ ವ್ಯವಸ್ಥೆಗಾಗಿ ಕರ್ನಾಟಕ ಬ್ಯಾಂಕ್ ನಿರಂತರವಾಗಿ ಸಹಾಯ ಹಸ್ತ ನೀಡುವ ಮೂಲಕ ಕೆರೆಯ ನೀರನ್ನ ಕೆರೆಗೆ ಚೆಲ್ಲುವ ಕಾರ್ಯ ನಡೆಸಿದೆ.ಉಮಾಮಹೇಶ್ವರಿ ಕ್ಷೇತ್ರದವರು ನಮ್ಮನ್ನು ಸಂಪರ್ಕಿಸಿದಾಗ ಅಮೃತ ಸಮಾನವಾದ ಶುದ್ಧ ನೀರನ್ನ ಭಕ್ತಾಧಿಗಳಿಗೆ ವಿತರಿಸುವ ಸಲುವಾಗಿ ಧೃಡ ಕಲಶೋತ್ಸವದ ಶುಭ ಸಂದರ್ಭದಲ್ಲೇ ಹೊಸತಾದ ವಾಟರ್ ಡಿಸ್ಪೆನ್ಸರನ್ನು ಬಹಳ ಸಂತೋಷದಿಂದ ಕ್ಷೇತ್ರಕ್ಕೆ ನೀಡಲಾಗಿದೆಯೆಂದರು.

ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್‌ ,ಆಡಳಿತ ಮಂಡಳಿ ಪ್ರ.ಕಾ ದಿನೇಶ್.ಕೆ.ಅತ್ತಾವರ,ಕೋಶಾಧಿಕಾರಿ ಟಿ.ರಘುರಾಮ ಶೆಟ್ಟಿ,ಮೊಕ್ತೇಸರರುಗಳಾದ ಈಶ್ವರ್ ಉಳ್ಳಾಲ್,ನಿರ್ಮಲ ಕುಂಞಬು,ಮಹಾಲಿಂಗ,ಡಾ.ರಾಮಕೃಷ್ಣ ಶೆಟ್ಟಿ,ಕೂಸಪ್ಪ ಗಟ್ಟಿ,ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷರಾದ ಸುರೇಶ್ ಭಟ್ನಗರ,ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಾಪಿಕಾಡು,ಉಮಾಮಹೇಶ್ವರಿ ಸೇವಾ ಸಮಿತಿಯ ಗೌರವಾಧ್ಯಕ್ಷರಾದ ಸುರೇಂದ್ರ ನಾಯಕ್,ಅಧ್ಯಕ್ಷರಾದ ದಿನೇಶ್ ರೈ ಕಳ್ಳಿಗೆ,ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್,ಪ್ರಮುಖರಾದ ಆನಂದ ಶೆಟ್ಟಿ ಭಟ್ನಗರ,ಸಂಜೀವ ಶೆಟ್ಟಿ ಪಿಲಾರ್,ಮೋಹನ್ ದಾಸ್ ಕಾಪಿಕಾಡ್,ಶಿವರಾಮ್ ಕಾಪಿಕಾಡು,ಚರಣ್ ಮೊದಲಾದವರು ಉಪಸ್ಥಿತರಿದ್ದರು

Exit mobile version