Site icon Ullalavani

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ 5 ಲಕ್ಷ ಮೌಲ್ಯದ ಗಾಂಜಾ ವಶ..!!

ಮಂಗಳೂರು, ಮಾ.24: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಅಕ್ರಮ ಗಾಂಜಾ ವಶಪಡಿಸಿಕೊಂಡ ಘಟನೆ ನಡೆದಿದೆ.

ಮಾರ್ಚ್ 23ರಂದು ಬೆಳಿಗ್ಗೆ ಸುಮಾರು 11.56 ಗಂಟೆಯ ವೇಳೆ, ಪಾಲಕ್ಕಾಡ್ ವಿಭಾಗದ ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ IPF ಮನೋಜ್ ಕುಮಾರ್ ಯಾದವ್ ಹಾಗೂ ಸಿಬ್ಬಂದಿ, MAS–MAQ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12601) ರೈಲು ಪ್ಲಾಟ್‌ಫಾರ್ಮ್ ಸಂಖ್ಯೆ 1ಕ್ಕೆ ಆಗಮಿಸಿದಾಗ ಸಾಮಾನ್ಯ ಡಬ್ಬಿಯಲ್ಲಿ ಅನಾಥವಾಗಿ ಬಿಟ್ಟಿದ್ದ ಸಂಶಯಾಸ್ಪದ ಚೀಲವನ್ನು ಪರಿಶೀಲಿಸಿದರು.


ಪರಿಶೀಲನೆಯ ವೇಳೆ, ಸುಮಾರು 10.129 ಕೆಜಿ ಒಣ ಗಾಂಜಾ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ₹5,06,450/- ಎಂದು ತಿಳಿದುಬಂದಿದೆ.


ವಶಪಡಿಸಿಕೊಂಡ ಗಾಂಜಾವನ್ನು ಮಂಗಳೂರು ಅಬಕಾರಿ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಗಾಂಜಾ ಸಾಗಾಟದ ಹಿಂದೆ ಇರುವವರನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Exit mobile version