Site icon Ullalavani

ಯೆನಪೋಯ ಆಟೊ ಪಾರ್ಕ್‌ನ ಅಡ್ಮಿನ್‌ ಆಟೊ ರಾಜಕನ್ಮಾರ್ ಯೂನಿಯನ್ ಮೊಹಿದಿನ್ ನಿಧನ

ಯೆನೆಪೋಯ: ಆಟೊ ರಾಜಕನ್ಮಾರ್ ಯೂನಿಯನ್ (ರಿ), ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಕೋಶಾಧಿಕಾರಿ ಹಾಗೂ ಯೆನಪೋಯ ಆಟೊ ಪಾರ್ಕ್‌ನ ಆಡ್ಮಿನ್ ಆಗಿದ್ದ ಮದನಿನಗರ ನಿವಾಸಿ ಮೊಹಿದಿನ್ (40) ಅವರು ಇಂದು ನಿಧನರಾದರು.

ಕೆಲವು ದಿನಗಳ ಹಿಂದೆ ಅಸೌಖ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.

ಮೊಹಿದಿನ್ ಅವರು ಆಟೊ ಚಾಲಕರ ಸಂಘಟನೆಗೆ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ನೀಡಿದ ಸೇವೆ ಅನನ್ಯವಾಗಿತ್ತು. ಎಲ್ಲ ಜನಾಂಗದವರೊಂದಿಗೆ ಸ್ನೇಹಪೂರ್ಣ ಸಂಬಂಧ ಹೊಂದಿದ್ದ ಅವರು, ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು.

ಅವರ ಅಗಲಿಕೆಯಿಂದ ಆಟೊ ರಾಜಕನ್ಮಾರ್ ಯೂನಿಯನ್ ಹಾಗೂ ಸಮುದಾಯವು ಅಮೂಲ್ಯ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮೃತರು ಪತ್ನಿ, ಮಕ್ಕಳು ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಈ ಕುರಿತು ಆಟೊ ರಾಜಕನ್ಮಾರ್ ಯೂನಿಯನ್ (ರಿ), ದಕ್ಷಿಣ ಕನ್ನಡ ಜಿಲ್ಲೆ ತೀವ್ರ ಸಂತಾಪ ಸೂಚಿಸಿದೆ.

Exit mobile version