ಉಳ್ಳಾಲ: ಮೀನುಗಾರಿಕೆಗೆ ತೆರಳಿದ್ದ ಗಿಲೆಟ್ ದೋಣಿಯಲ್ಲಿ ಅವಘಡ ಸಂಭವಿಸಿ, ಮೀನುಗಾರಿಕೆಗಾಗಿ ಬಳಸುತ್ತಿದ್ದ ಬಲೆ ಹಾಗೂ ಇತರ ಪರಿಕರಗಳು ಸಮುದ್ರದಲ್ಲಿ ಮುಳುಗಿ ಹಾನಿಯಾದ ಘಟನೆ ನಡೆದಿದೆ.
ಸಂಖ್ಯೆಯ ಗಿಲೆಟ್ ದೋಣಿಯಲ್ಲಿ ಕೋಟೆಪುರದಿಂದ ಕ್ಯಾಪ್ಟನ್ ಅಬ್ದುಲ್ ರೆಹಮಾನ್, ಅರುಣ್ ಹಾಗೂ ಚಾಲೋಸ್ ಅವರು ಮಾ.16ರಂದು ಮೀನುಗಾರಿಕೆಗೆ ತೆರಳಿದ್ದರು. ಅಳಿವೆ ಬಾಗಿಲಿನಿಂದ ಪಶ್ಚಿಮಕ್ಕೆ ಸುಮಾರು 8 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ, ಬಲೆ ಹಾಗೂ ಇತರ ಉಪಕರಣಗಳು ನೀರಿನಲ್ಲಿ ಮುಳುಗಿ ಕಾಣೆಯಾಗಿವೆ. ಈ ಅವಘಡದಿಂದ ಮೀನುಗಾರರಿಗೆ ಅಪಾರ ಆಥಿಕ ನಷ್ಟ ಉಂಟಾಗಿದೆ. ಈ ಸಂಬಂಧ ಅಬ್ದುಲ್ ರೆಹಮಾನ್ ನೀಡಿದ ದೂರಿನ ಮೇರೆಗೆ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.