Site icon Ullalavani

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸಿದ್ಧತೆಯ ನಡುವೆ ಹಳೆಕೋಟೆ ಸೈಯದ್ ಮದನಿ ಶಾಲೆಯಲ್ಲಿ ಈದ್ ಸಂಭ್ರಮ


ಉಳ್ಳಾಲ; ಉಳ್ಳಾಲದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸೈಯದ್ ಮದನಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪಬ್ಲಿಕ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಈ ದಿನದಲ್ಲಿ ಸಂತಸದಿಂದ ಪರೀಕ್ಷಾ ಪುನರಾವರ್ತನೆ ಕಾರ್ಯದಲ್ಲಿ ತೊಡಗಿದರು.

ಶುಕ್ರವಾರ ಈದ್ ಹಬ್ಬವಾಗಿದ್ದು ಸೋಮವಾರದಂದು ಎಸ್ ಎಸ್ ಎಲ್ ಸಿ ಯಲ್ಲಿ ವಿಜ್ಞಾನ ಪರೀಕ್ಷೆಗೆ ವಿದ್ಯಾರ್ಥಿಗಳು ಹಾಜರಾಗಬೇಕು. ಆದರೆ ಹಬ್ಬದ ಸಂತಸದಲ್ಲಿ ತಾವು ಓದಿರುವುದನ್ನು ಮರೆತೆರೆ ಪರೀಕ್ಷೆಗೆ ತೊಂದರೆ ಆಗಬಹುದು ಎಂಬಂತ ಉದ್ದೇಶದಿಂದ ವಿದ್ಯಾರ್ಥಿಗಳು ಸ್ವಯಂ ಪ್ರೇರಿತರಾಗಿ ಈ ದಿನವೂ ಶಾಲೆಗೆ ಹಾಜರಾದರು ಮತ್ತು ಪರೀಕ್ಷಾ ಪೂರ್ವ ತಯಾರಿ ಕಾರ್ಯದಲ್ಲಿ ತೊಡಗಿದರು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಾಲೆಗೆ ಹಾಜರಾಗಿರುವುದು ವಿಶೇಷವಾಗಿದೆ.


ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳಿಗೂ ಮತ್ತು ಶಿಕ್ಷಕರಿಗೂ ಹಬ್ಬದೂಟವನ್ನು ಶಾಲಾ ಸಂಚಾಲಕರಾದ ಜನಾಬ್ ಮೊಹಮ್ಮದ್ ಇಸ್ಮಾಯಿಲ್ ಹಾಜಬ್ಬ ರವರು ವ್ಯವಸ್ಥೆ ಮಾಡಿದ್ದರು. ಕಳೆದ ವರ್ಷ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಈದ್ ಹಬ್ಬವನ್ನು ಶಾಲೆಯಲ್ಲಿ ಆಚರಿಸಿ ಪರೀಕ್ಷಾ ತರ ಬೇತಿಯಲ್ಲಿ ತೊಡಗಿದ್ದರು. ಎಂದು ಶಾಲಾ ಮುಖ್ಯ ಶಿಕ್ಷಕರಾದ ಕೆ ಎಂ ಕೆ ಮಂಜನಾಡಿಯವರು ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆಯನ್ನು ಸೂಚಿಸಿದರು.

ಈ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕಿ ರಮ್ಲಾ ಬಾನು, ಸಪ್ನ, ಶಕೀಲಾ, ಬಬಿತಾ ಸೆಲಿನ್ ಡಿಸೋಜಾ, ಸೌಮ್ಯ, ಶಶಿಕಲಾ, ಕುಮಾರಿ ಮೋನಿಷಾ, ಸುಮಾ ಮೊದಲಾದವರು ಉಪಸ್ಥಿತರಿದ್ದರು.

Exit mobile version