Site icon Ullalavani

ಬಾಳೆಪುಣಿಯಲ್ಲಿ ಸಂಭ್ರಮದ ಈದ್ ಆಚರಣೆ

ಉಳ್ಳಾಲ ತಾಲ್ಲೂಕಿನ ಇರಾ ಗ್ರಾಮದ ಬಾಳೆಪುಣಿ ಬದ್ರಿಯಾ ಜುಮಾ ಮಸೀದಿಯಲ್ಲಿ ಈದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈದ್ ನಮಾಝ್ ಬಳಿಕ ಮಸೀದಿಯ ಗುರುಗಳು ಕುತುಬಾ ಬಾಷಣದಲ್ಲಿ ನಾಡಿನ ಸರ್ವ ಜನಾಂಗದ ಶಾಂತಿ, ಸೌಹಾರ್ದತೆ ಮತ್ತು ಸಹಬಾಳ್ವೆಗಾಗಿ ದುಆ ಮಾಡಿದರು.

ಈ ಸಂದರ್ಭದಲ್ಲಿ ಪರಸ್ಪರ ಪ್ರೀತಿ-ವಿಶ್ವಾಸದಿಂದ ಬದುಕಬೇಕು, ಸಮಾಜದಲ್ಲಿ ಐಕ್ಯತೆ ಬೆಳೆಸಬೇಕು ಎಂಬ ಸಂದೇಶವನ್ನು ನೀಡಲಾಯಿತು.


ನಮಾಝ್ ಬಳಿಕ ಭಕ್ತರು ಪರಸ್ಪರ ಈದ್ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

Exit mobile version