ಕೋಟೆಕಾರ್: ಅಲ್ ಹಿದಾಯ ಜುಮಾ ಮಸ್ಜಿದ್, ಕರ್ನಾಟಕ ಮುಸ್ಲಿಂ ಜಮಾತ್, ಎಸ್ ವೈ ಎಸ್ ಹಾಗೂ ಎಸ್ಸೆಸ್ಸಫ್ ಸಂಘಟನೆಗಳ ವತಿಯಿಂದ ಮಸೀದಿ ವಠಾರದಲ್ಲಿ ಇಫ್ತಾರ್ ಕೂಟ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಸೀದಿ ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಅವರು ದುವಾ ನೆರವೇರಿಸಿದರು. ಕೆ ಎಮ್ ಜೆ ಅಧ್ಯಕ್ಷ ಅಬ್ದುಲ್ ಕರೀಂ, ಎಸ್ ವೈ ಎಸ್ ಅಧ್ಯಕ್ಷ ಸಬೀರ್ ಅಶ್ ಅರಿ, ಎಸ್ಸೆಸ್ಸಫ್ ಅಧ್ಯಕ್ಷ ಸದಕತುಲ್ಲಾ, ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್ ಉಪಸ್ಥಿತರಿದ್ದರು.
ಸುನ್ನೀ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಊರಿನ ನಾಗರಿಕರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿ.ಎಚ್ ಕಾರ್ಯಕ್ರಮವನ್ನು ನಿರೂಪಿಸಿದರು.