Site icon Ullalavani

ಉಳ್ಳಾಲ ಸೆಂಟ್ರಲ್ ಕಮಿಟಿಯಿಂದ ಬೃಹತ್ ಸೌಹಾರ್ದ ಇಫ್ತಾರ್ ಕೂಟ

ಉಳ್ಳಾಲ: ನಮ್ಮ ಧರ್ಮವನ್ನು ಅಚ್ಚುಕಟ್ಟಾಗಿ ಆಚರಿಸಿ, ಇನ್ನೊಂದು ಧರ್ಮದ ಸಂಸ್ಕೃತಿಯನ್ನು ಅರಿತು ಬದುಕಿದಾಗ ಸೌಹಾರ್ದ ಸಮಾಜ ಹಾಗು ಬಲಿಷ್ಠ ಭಾರತ ನಿರ್ಮಾಣ ಸಾಧ್ಯ. ಯಾವುದೇ ಧರ್ಮದ ಸಂದೇಶ ಮನಸ್ಸಿನ ಗಾಯ ಗುಣಪಡಿಸುವ ಔಷಧವಾಗಿರಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಇವರು ಉಳ್ಳಾಲ ಸೆಂಟ್ರಲ್ ಕಮಿಟಿ ವತಿಯಿಂದ ಮಾಸ್ತಿಕಟ್ಟೆಯಲ್ಲಿ ನಡೆದ ಬೃಹತ್ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದರು.

ಯುನಿವೆಫ್ ಕರ್ನಾಟಕ ಸ್ಥಾಪಕಾಧ್ಯಕ್ಷರ ರಫೀವುದ್ದೀನ್ ಕುದ್ರೋಳಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಘಟನಾ ಸ್ಪೂರ್ತಿ ಪ್ರಶಸ್ತಿ ಪುರಸ್ಕೃತ ಹಳೆಕೋಟೆ ಸಯ್ಯಿದ್ ಮದನಿ ಪ್ರೌಢಶಾಲಾ ಮುಖ್ಯಶಿಕ್ಷಕ ಕೆಎಂಕೆ ಮಂಜನಾಡಿ ಅವರನ್ನು ಸನ್ಮಾನಿಸಲಾಯಿತು.

ಕೋಡಿಜಾಲ್ ರಿಫಾಯಿ ಜುಮಾ ಮಸೀದಿಯ ಖತೀಬ್ ಉವೈಸ್ ಮದನಿ ಅಲ್‌ಅಝ್ಹರಿ ತೋಕೆ ದುಆ ನೆರವೇರಿಸಿದರು. ಉಳ್ಳಾಲ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ನವಾಝ್ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಡಿಪಿಐ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ದೇರಳಕಟ್ಟೆ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಅರ್ಜುನ್, ತೊಕ್ಕೊಟ್ಟು ರೀಚಲ್ ಸರ್ವಿಸಸ್ ಸ್ಥಾಪಕ ಸಿರಿಲ್ ಡಿ’ಸೋಜ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಮುಹಮ್ಮದ್ ತ್ವಾಹ ಹಾಗು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಯು.ಕೆ.ಮುಸ್ತಫಾ ಕಾರ್ಯಕ್ರಮ ನಿರೂಪಿಸಿದರು.

Exit mobile version