Site icon Ullalavani

ಗ್ಯಾಸ್ ವಿತರಣೆಗೆ ಸರ್ಕಾರದ ಹೊಸ ಮಾರ್ಗಸೂಚಿಗಳು

ಬೆಂಗಳೂರು, ಮಾ. 18 : ರಾಜ್ಯದಲ್ಲಿ ಎಲ್‌ಪಿಜಿ ಗ್ಯಾಸ್‌ ವಿತರಣೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಅಗತ್ಯ ಸೇವಾ ವಲಯಗಳಿಗೆ ಮೊದಲ ಆದ್ಯತೆ ನೀಡಲಾಗಿದ್ದು, ನಾಳೆಯಿಂದಲೇ ಈ ನಿಯಮಗಳು ಜಾರಿಯಾಗಲಿವೆ.

ಸರ್ಕಾರ ಹೊರಡಿಸಿರುವ ಗೈಡ್‌ಲೈನ್ಸ್ ಪ್ರಕಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಶೇ.100ರಷ್ಟು ಗ್ಯಾಸ್ ವಿತರಣೆ ಮಾಡಲು ಸೂಚಿಸಲಾಗಿದೆ. ಇನ್ನುಳಿದ ಪ್ರಮುಖ ವಲಯಗಳಿಗೂ ನಿರ್ದಿಷ್ಟ ಪ್ರಮಾಣದಲ್ಲಿ ಗ್ಯಾಸ್ ಹಂಚಿಕೆ ಮಾಡುವಂತೆ ಏಜೆನ್ಸಿ ಕಂಪನಿಗಳಿಗೆ ಸೂಚನೆ ನೀಡಲಾಗಿದೆ.ವಲಯವಾರು ಗ್ಯಾಸ್ ವಿತರಣೆಯ ಪ್ರಮಾಣ:
ಆಸ್ಪತ್ರೆಗಳು – 100%
ಶೈಕ್ಷಣಿಕ ಸಂಸ್ಥೆಗಳು – 100%
ಸೀಡ್ ಪ್ರೊಸೆಸಿಂಗ್ ಘಟಕಗಳು – 70%
ಆಯಿಲ್ ಉತ್ಪಾದನಾ ಕಂಪನಿಗಳು – 70%
ಏರ್‌ಲೈನ್ಸ್ ಮತ್ತು ರೈಲ್ವೆ – 70%
ವೃದ್ಧಾಶ್ರಮಗಳು – 70%
ಇಂಡಸ್ಟ್ರಿಯಲ್ ಕ್ಯಾಂಟೀನ್‌ಗಳು – 10%
ಕಾರ್ಪೋರೇಟ್ ಗೆಸ್ಟ್ ಹೌಸ್‌ಗಳು – 10%
ಫುಡ್ ಪ್ರೊಸೆಸಿಂಗ್ ಕಂಪನಿಗಳು – 10%
ಹೋಟೆಲ್‌ಗಳು – 10%ಸರ್ಕಾರವು ಅಗತ್ಯ ಸೇವೆಗಳ ನಿರಂತರ ಕಾರ್ಯಾಚರಣೆಗೆ ಆದ್ಯತೆ ನೀಡಿರುವುದಾಗಿ ತಿಳಿಸಿದೆ. ಅದರಂತೆ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳ ಕಾರ್ಯಾಚರಣೆಗೆ ಯಾವುದೇ ವ್ಯತ್ಯಯ ಉಂಟಾಗದಂತೆ ಶೇ.100 ಗ್ಯಾಸ್ ಪೂರೈಕೆ ಖಚಿತಪಡಿಸಲು ಕ್ರಮ ಕೈಗೊಳ್ಳಲಾಗಿದೆ.ಇನ್ನು ಹೋಟೆಲ್ ಮತ್ತು ಇತರೆ ವಾಣಿಜ್ಯ ವಲಯಗಳಿಗೆ ಕೇವಲ 10% ಗ್ಯಾಸ್ ವಿತರಣೆ ಮಾತ್ರ ಅನುಮತಿಸಲಾಗಿದೆ. ಆದರೂ, ಇಂದಿನಿಂದ ಹೋಟೆಲ್‌ಗಳು ಕಮರ್ಷಿಯಲ್ ಗ್ಯಾಸ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಈ ಹೊಸ ನಿಯಮಗಳಿಂದ ಅಗತ್ಯ ಸೇವೆಗಳು ಸುಗಮವಾಗಿ ಸಾಗುವಂತೆ ಸರ್ಕಾರ ಉದ್ದೇಶಿಸಿರುವುದು ಸ್ಪಷ್ಟವಾಗಿದೆ.

Exit mobile version