ಸೋಮೇಶ್ವರ : ಇಲ್ಲಿನ ಮಣ್ಣಲ್ಲಿ ಸಣ್ಣ ಗುಡಿಯೊಂದು ಕೆಲವೇ ವರುಷಗಳಲ್ಲಿ ಪವಾಡ ಸದೃಶವಾಗಿ ಬೆಳೆದು ನಿಂತದನ್ನ ಕಂಡಾಗ ನಿಜಕ್ಕೂ ದಿಗ್ಭ್ರಮೆಯಾಗುತ್ತದೆ.ಭಕ್ತಿ ಶ್ರದ್ಧೆಯ ಆರಾಧನೆ ಮತ್ತು ದಾನ,ಧರ್ಮಗಳ ಆಧಾರದಡಿ ಯಾವುದೇ ಕ್ಷೇತ್ರಗಳ ಶಕ್ತಿ ಬೆಳಗುತ್ತದೆ.ರಕ್ತೇಶ್ವರಿ ಕ್ಷೇತ್ರದ ಅಭಿವೃದ್ಧಿ ಕಾರ್ಯದ ಜೊತೆ ಕಳೆದ ಇಪ್ಪತ್ತೈದು ವರುಷಗಳಲ್ಲಿ ಸಾವಿರಾರು ಜನರಿಗೆ ಉಪಯುಕ್ತಕಾರಿ ಸಾರ್ಥಕ ಕಾರ್ಯಗಳನ್ನ ಮಾಡಿರುವ ಸೋಮೇಶ್ವರದ ರಕ್ತೇಶ್ವರಿ ಬಳಗದವರ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಮಾದರಿಯಾಗಿದೆಯೆಂದು ನಿವೃತ್ತ ಶಿಕ್ಷಕರಾದ ಕೆ.ಆರ್.ಚಂದ್ರ ಅಭಿಪ್ರಾಯಪಟ್ಟರು.
ಸೋಮೇಶ್ವರದ ರಕ್ತೇಶ್ವರಿ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ನಡೆದ ರಕ್ತೇಶ್ವರೀ ಬಳಗದ 26ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸೋಮೇಶ್ವರ ರಕ್ತೇಶ್ವರಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ ಹಿರಿಯ ಪತ್ರಕರ್ತರಾದ ವಿದ್ಯಾಧರ ಶೆಟ್ಟಿ,ಭಜಕರಾದ ನಾಗೇಶ್ ಗಟ್ಟಿ ಕೊಲ್ಯ,ಪ್ರಮುಖರಾದ ಸಂದೀಪ್ ಶೆಣೈ,ರಘುರಾಮ ಸುವರ್ಣ ಅವರನ್ನ ವೇದಿಕೆಯಲ್ಲಿ ಅಭಿನಂದಿಸಲಾಯಿತು. ಸೋಮೇಶ್ವರ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ ಪರ್ಯತ್ತೂರು ಅಧ್ಯಕ್ಷತೆ ವಹಿಸಿದ್ದರು.ಹೇಮಲತಾ ಆರ್.ಶೆಟ್ಟಿ,ರಕ್ತೇಶ್ವರಿ ಕ್ಷೇತ್ರದ ಅಧ್ಯಕ್ಷರಾದ ರಾಮದಾಸ್ ಸೋಮೇಶ್ವರ ಉಪಸ್ಥಿತರಿದ್ದರು.
ರಕ್ತೇಶ್ವರಿ ಬಳಗದ ಅಧ್ಯಕ್ಷರಾದ ರವಿಶಂಕರ್ ಸೋಮೇಶ್ವರ ಸ್ವಾಗತಿಸಿದರು.ಪತ್ರಕರ್ತರಾದ ವಿದ್ಯಾಧರ ಶೆಟ್ಟಿ ನಿರೂಪಿಸಿದರು.ವರುಣ್ ರಾಜ್ ವಂದಿಸಿದರು.
ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಶಿಧರ ಪೊಯ್ಯತ್ತಬೈಲು,ಶಿಲ್ಪಿ ಶಂಕರನಾರಾಯಣ ಆಚಾರ್ಯ ಕೋಟೆಕಾರು,ನಾಟಿ ವೈದ್ಯರಾದ ತಿಲಕ್ ಸೋಮೇಶ್ವರ,ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟರ್ ಕುಮಾರಿ ಗೀತಾಭಾಯಿ,ಅಂತರಾಷ್ಟ್ರೀಯ ಮಟ್ಟದ ಓಟಗಾರ ಚಂದ್ರಶೇಖರ ಪೆರಿಬೈಲು,ರಾಜ್ಯ ಮಟ್ಟದ ಕರಾಟೆ ಪಟು ಮಾ.ಚಿರಾಗ್ ಸೋಮೇಶ್ವರ ಅವರನ್ನ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.