Site icon Ullalavani

ಸಮಾಜಕ್ಕೆ ಪ್ರೊ.ಜೋಗನ್ ಶಂಕರ್ ಕೊಡುಗೆ ಅಪಾರ: ಪ್ರೊ.ಸಮತಾ ದೇಶ್ಮನೆ

ಕೊಣಾಜೆ: ಪ್ರೊ.ಜೋಗನ್ ಶಂಕರ್ ಅವರು ಸಮ ಸಮಾಜದ ನಿರ್ಮಾಣ ಹಾಗೂ ಸಮಾಜದ ನೈಜ ಅಭಿವೃದ್ಧಿಯ ಕನಸಿನೊಂದಿಗೆ ಸಮಾಜಕ್ಕೆ ಕೊಡುಗೆ‌ ನೀಡಿದ ಸಮಾಜಶಾಸ್ತ್ರಜ್ಞರಾಗಿದ್ದಾರೆ ಎಂದು ಬೆಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರಾದ ಪ್ರೊ.ಸಮತಾ ದೇಶ್ಮನೆ ಅವರು ಹೇಳಿದರು.


ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಮಂಗಳವಾರ ನಡೆದ ಪ್ರೊ.ಜೋಗನ್ ಶಂಕರ್ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುವುದು ಶಿಕ್ಷಣದಿಂದ ಮಾತ್ರ ಎಂಬುದು ಅವರ ನಿಲುವುಗಿತ್ತು. ಸಮಾಜದ ಧನಾತ್ಮಕ ಚಿಂತಕರಾಗಿದ್ದ ಪ್ರೊ.ಜೋಗನ್ ಶಂಕರ್ ದೇವದಾಸಿ ಪದ್ದತಿಯ ಬಗ್ಗೆ ನಡೆಸಿದ ಹೋರಾಟ ಅವಿಸ್ಮರಣೀಯವಾದುದು. ದೇವದಾಸಿಯರ ಮಕ್ಕಳಿಗಾಗಿ ವಿಮೋಚನಾ ಶಾಲೆಯನ್ನು ತೆರದು ಶಿಕ್ಷಣ ‌ನೀಡಿದ ಮಹಾನ್ ವ್ಯಕ್ತಿತ್ಚ ಅವರದ್ದು. ಶಿಕ್ಷಣದಿಂದಾಗಿ ಅದೆಷ್ಟೋ ದಲಿತ ಮಹಿಳೆಯರು ಸಮಾಜದ ಮುನ್ನಲೆಗೆ ಬಂದಿದ್ದಾರೆ. ಇಂತಹ ಪ್ರಾಧ್ಯಾಪಕರ ಹೆಸರಿನಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮ ಅರ್ಥಪೂರ್ಣವಾದುದು ಎಂದರು.
ಕಾರ್ಯಕ್ರಮದಲ್ಲಿ ಕಲಾ ನಿಕಾಯದ ಡೀನ್ ಪ್ರೊ.ಪರಿಣಿತ, ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ.ತ್ರಿವೇಣಿ, ಪ್ರಾಧ್ಯಾಪಕರಾದ ಡಾ.ನರಸಿಂಹಯ್ಯ ಮೊದಲಾದವರು ಉಪಸ್ಥಿತರಿದ್ದರು.


ವಿಭಾಗದ ಅಧ್ಯಕ್ಷರಾದ ಡಾ.ಗೋವಿಂದ ರಾಜು ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ.ಸಬಿತಾ ಗುಂಡ್ಮಿ ವಂದಿಸಿದರು. ವಿದ್ಯಾರ್ಥಿನಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

Exit mobile version