Site icon Ullalavani

ಬೋಳಿಯಾರು ಮಾಗಂಧಡಿಯಲ್ಲಿ ವಾಸವಿದ್ದ ಮಹಿಳೆ ನಾಪತ್ತೆ..!!

ಕೊಣಾಜೆ ;ಬೋಳಿಯಾರು ಮಾಗಂಧಡಿಯಲ್ಲಿ ವಾಸವಿದ್ದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕು ಮಲ್ಲಾಪುರದ ಮೂಲದ ಶೋಭಾ ಹನುಮಂತಪ್ಪ ಭಜಂತ್ರಿ (33) ಎಂಬವರು ನಾಪತ್ತೆಯಾಗಿದ್ದಾರೆ. ಮಾ.7ರoದು ಬೆಳಗ್ಗೆ ಮಕ್ಕಳನ್ನು ಬೋಳಿಯಾರು ಶಾಲೆಗೆ ಕರೆದುಕೊಂಡು ಹೋದವರು, ಅಲ್ಲಿಂದ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾಗಿರುವ ಮಹಿಳೆ 5.5ಅಡಿ ಎತ್ತರ, ಸಾಧಾರಣ ಶರೀರ, ದುಂಡು ಮುಖ, ಎಣ್ಣೆ ಕಪ್ಪು ಮೈ ಬಣ್ಣ, ಮೆಳ್ಳೆಗಣ್ಣು ಇದೆ. ಕನ್ನಡ, ಹಿಂದಿ ಭಾಷೆಯನ್ನು ಬಲ್ಲವರಾಗಿದ್ದಾರೆ. ಈ ಚಹರೆಯ ಮಹಿಳೆ ಪತ್ತೆಯಾದರೆ ಕೊಣಾಜೆ ಠಾಣೆಯನ್ನು ಸಂಪರ್ಕಿಸಬೇಕಾಗಿ ಪೊಲೀಸರು ತಿಳಿಸಿದ್ದಾರೆ.

Exit mobile version