ಮಂಗಳೂರು, ಮಾ. 14 : ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡದಿಂದ ಕರಾವಳಿ ಭಾಗದಿಂದ ವಿದೇಶಕ್ಕೆ ರಫ್ತಾಗುತ್ತಿದ್ದ ಮಲ್ಲಿಗೆ ಹೂವುಗಳ ಬೇಡಿಕೆ ಕಮರಿದರೆ, ಮೀನುಗಳ ರಫ್ತು ಬಹುತೇಕ ಸ್ಥಗಿತಗೊಂಡಿದೆ. ಇದು ಕರಾವಳಿಯ ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಲಿದ್ದು, ವಿಶೇಷವಾಗಿ ಕಸ್ಟಮ್ಸ್ ಇಲಾಖೆಯ ಆದಾಯಕ್ಕೆ ಹೊಡೆತ ಬೀಳಲಿದೆ.
ದುಬೈ, ಅಬುಧಾಬಿ, ಕುವೈಟ್, ಸೌದಿ, ಕತಾರ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರ ಸಂಖ್ಯೆ 8 ಲಕ್ಷಕ್ಕೂ ಅಧಿಕವಿದೆ. ಅವರ ಬೇಡಿಕೆಯ ಮೇರೆಗೆ ಮಂಗಳೂರಿನಿಂದ ಹೂ, ಮೀನು, ತರಕಾರಿ, ಹಣ್ಣುಹಂಪಲು, ಬಿಡಿಭಾಗಗಳು ಕಾರ್ಗೋ ಮುಖಾಂತರ ಸಾಗಾಟ ಮಾಡಲಾಗುತ್ತಿತ್ತು. ಮುಂಬಯಿ ಏಜೆಂಟರು, ಮಂಗಳೂರು ಮತ್ತು ಉಡುಪಿಯಿಂದ ತಮಗೆ ಬೇಕಾದಷ್ಟು ಮಲ್ಲಿಗೆ ಹೂ ಆರ್ಡರ್ ಮಾಡುತ್ತಾರೆ. ದಿನಕ್ಕೆ 250-300 ಅಟ್ಟೆ ಮಲ್ಲಿಗೆ ಮುಂಬಯಿಗೆ ಕಳುಹಿಸಿದರೆ ಅದರಲ್ಲಿ 150-200 ಆಟ್ಟೆ ಮಲ್ಲಿಗೆ ಕೊಲ್ಲಿ ರಾಷ್ಟ್ರಕ್ಕೆ ಕಳುಹಿಸಿಕೊಡುತ್ತಾರೆ ಎಂದು ರಖಂ ಮಲ್ಲಿಗೆ ವ್ಯಾಪಾರಿ ವಿನ್ಸೆಂಟ್ ..ವಿಮಾನ ಮೂಲಕ ಅಂಚೆ, ಬಯೋ ಸ್ಯಾಂಪಲ್, ಚಿನ್ನಾಭರಣ, ಏಡಿಗಳು, ಮೀನು, ಕನ್ಸಲ್ ಕಾರ್ಗೊ, ಮುದ್ರಿತ ಸಾಮಗ್ರಿ, ದಾಖಲೆಗಳು, ವಿದೇಶಿ ಕರೆನ್ಸಿ, ವೈದ್ಯಕೀಯ ಉಪಕರಣಗಳು, ಸಾಂದರ್ಭಿಕ ಯಂತ್ರೋಪಕರಣ ಭಾಗಗಳು, ವೈದ್ಯಕೀಯ ಉಪಕರಣಗಳು ದೇಶದೊಳಗೆ ಸಾಗಾಟವಾದರೆ, ವಿದೇಶಕ್ಕೆ ಹಣ್ಣುಹಂಪಲು, ತರಕಾರಿ, ಹೂವುಗಳು, ಬಿಡಿಭಾಗಗಳು ಸಾಗಾಟವಾಗುತ್ತಿವೆ.
ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ ಕಾರ್ಮೋಡದಿಂದ ನಮಗೆ ಸಿಗಡಿ, ಅಂಜಲ್, ಮಾಂಜಿ, ಬೊಂಡಾಸ್ ಮೀನುಗಳನ್ನು ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಕೋಟ್ಯಂತರ ರೂ. ನಷ್ಟವಾಗುತ್ತಿದೆ. ಹಡಗು, ಕಂಟೈನರ್ ಬಾರದ ಕಾರಣ ಉದ್ಯಮ ವಲಯಕ್ಕೆ ಹೊಡೆತ ಬಿದ್ದಿದೆ. ಕಾರ್ಗೋ ಸಂಪೂರ್ಣ ಸ್ಥಗಿತಗೊಂಡಿದ್ದು, ಸಹಜ ಸ್ಥಿತಿಗೆ ಬರುವವರೆಗೆ ಇದೇ ಸ್ಥಿತಿ ಮುಂದುವರಿಯಲಿದೆ.ಉದ್ಘಾಟನೆಯಾದ ಸಂಯೋಜಿತ ಸರಕು ಟರ್ಮಿನಲ್, 2026ರ ಜನವರಿ ವರೆಗೆ 12,185 ಟನ್ ಅಂತಾರಾಷ್ಟ್ರೀಯ ಮತ್ತು ದೇಶೀಯ ಸರಕುಗಳನ್ನು ಸಾಗಾಟ ಮಾಡಿದೆ.
ಅಂತಾರಾಷ್ಟ್ರೀಯ ಸರಕು ಸಾಗಣೆಯಲ್ಲಿ ಅಡಚಣೆ ಮುಂದುವರಿದರೆ ರಫ್ತು ಮತ್ತು ಆಮದಿಗೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.ದುಬೈ, ಕುವೈಟ್, ಸೌದಿ, ಅಬುಧಾಬಿಗೆ ಕಂಟೈನರ್, ಹಡಗು ಹಾಗೂ ವಿಮಾನ ಮೂಲಕ ಸಿಗಡಿ, ಬೊಂಡಾಸ್, ಅಂಜಲ್, ಮಾಂಜಿ ಮೀನುಗಳು ರಫ್ತಾಗುತ್ತಿತ್ತು. ಆದರೆ ಯುದ್ಧ ಕಾರ್ಮೋಡದಿಂದ ಕಂಟೈನರ್, ಹಡಗುಗಳು ಬರುತ್ತಿಲ್ಲ, ಇದು ಮಾತ್ರವಲ್ಲದೆ ಕಾರ್ಗೊ ವಿಮಾನ ಮೂಲಕ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಮತ್ತೋದ್ಯಮಕ್ಕೆ ಎನ್ನುತ್ತಾರೆ ಉದ್ಯಮಿಗಳು. ನಷ್ಟವಾಗುತ್ತಿದೆಹೂ, ಮೀನು, ತರಕಾರಿ, ಹಣ್ಣುಹಂಪಲು, ಬಿಡಿಭಾಗಗಳು ರಫ್ತು ಆಗದ ಕಾರಣ ಈ ಉದ್ಯಮ ವಲಯಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ. ಇದು ಮಾತ್ರವಲ್ಲದೆ ಕರಾವಳಿ ಭಾಗಕ್ಕೆ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಇಳಿಕೆ ಕಂಡಿದೆ ಎನ್ನುತ್ತಾರೆ ಮೀನುಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ದಿಲೀಪ್ ಕುಮಾರ್.