Site icon Ullalavani

ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವಿ


ಉಳ್ಳಾಲ, ಮಾ.14: ಡಾ. ರೋವಿನಾ ಶ್ಯಾರನ್ ಸೋನ್ಸ್ ಅವರಿಗೆ ಮಂಗಳೂರು ವಿಶ್ವವಿದ್ಯಾಲಯವು ‘ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿನ ಆಯ್ದ ಐಟಿಇಎಸ್ ಕಂಪನಿಗಳಲ್ಲಿ ಆರೋಗ್ಯ ಮತ್ತು ಕ್ಷೇಮ ಕಾರ್ಯಕ್ರಮಗಳ ಉದ್ಯೋಗಿಗಳ ಉತ್ಪಾದಕತೆಯ ಮೇಲೆ ಇರುವ ಪರಿಣಾಮ: ಒಂದು ಅಧ್ಯಯನ’ ವಿಷಯದ ಮೇಲೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಪದವಿಯನ್ನು ಪ್ರದಾನಿಸಿದೆ.

ಇತ್ತೀಚೆಗೆ ನಡೆದ ವೈವಾ ವೋಸ್ ಪರೀಕ್ಷೆಯಲ್ಲಿ ಅವರು ತಮ್ಮ ಮಹಾಪ್ರಬಂಧವನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು. ಈ ಸಂಶೋಧನಾ ಕಾರ್ಯವನ್ನು ವ್ಯವಹಾರ ಆಡಳಿತ ವಿಭಾಗದಲ್ಲಿ ಡಾ| ಶೇಖರ್ ನಾಯ್ಕ್ ಅವರ ಮಾರ್ಗದರ್ಶನದಲ್ಲಿ ನಡೆಸಲಾಗಿತ್ತು.


ಡಾ| ರೋವಿನಾ ಸೋನ್ಸ್ ಅವರು ಪ್ರಸ್ತುತ ಯೆನೇಪೊಯಾ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸಯನ್ಸ್, ಕಾಮರ್‍ಸ್ ಆಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಸಹಾಯಕ ಪ್ರಾಧ್ಯಾಪಕಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋನಿ ಸೋನ್ಸ್ ಮತ್ತು ರೋಝಿನಾ ಸೋನ್ಸ್ ಅವರ ಸುಪುತ್ರಿ ಆಗಿದ್ದಾರೆ. ಸಂತೋಷ್ ಬಂಗೇರ ಅವರ ಪತ್ನಿಯೂ ಆಗಿದ್ದಾರೆ.

Exit mobile version