ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ಅಝಾದ್ ನಗರದ ಅಲ್ ಮಸ್ಚಿದುಲ್ ಫಾರುಕ್ ಮತ್ತು ಅನ್ವರುಲ್ ಉಲೂಂ ಮದ್ರಸದ ವಾರ್ಷಿಕ ಮಹಾಸಭೆಯು ಅಧ್ಯಕ್ಷ ಬಾವ ಅಹಮ್ಮದ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಮದರಸದ ಹಾಲ್‍ನಲ್ಲಿ ಅಬ್ದುಲ್ ಬಾಶಿತ್ ಮದನಿ(ಇಮಾಮ್)ರವರ ದುವಾದೊಂದಿಗೆ ಜರಗಿತು.
2015-16ನೇ ಸಾಲಿನ ಅಧ್ಯಕ್ಷರಾಗಿ ಬಾವಾ ಅಹಮದ್, ಉಪಾಧ್ಯಕ್ಷರಾಗಿ ಅಹಮದ್ ರಫೀಕ್ ಆರ್. ಆರ್., ಕಾರ್ಯದರ್ಶಿಯಾಗಿ ಮೊೈದಿನಬ್ಬ, ಕೋಶಾಧಿಕಾರಿಯಾಗಿ ಮಹಮ್ಮದ್, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಜಿ ಹಾಗೂ ಅಬ್ದುಲ್ ಅಜೀಜ್, ಫಾರುಕ್ ಬಾವ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.