Site icon Ullalavani

ಎ.ಸಿ ಫಿಟಿಂಗ್ ವೇಳೆ ಆಯ ತಪ್ಪಿಬಿದ್ದ ತಲಪಾಡಿ ನಿವಾಸಿ ಹರ್ಷಿತ್ ಸಾವು..!!

ಉಳ್ಳಾಲ: ಬೆಂಗಳೂರಿನ ಕಟ್ಟಡವೊಂದರಲ್ಲಿ ಎ.ಸಿ ಫಿಟಿಂಗ್ ಕಾರ್ಯನಿರ್ವಹಿಸುತ್ತಿದ್ದಾಗ ಆಯತಪ್ಪಿ ಕೆಳಕ್ಕೆಬಿದ್ದು ಗಂಭೀರ ಗಾಯಗೊಂಡಿದ್ದ ತಲಪಾಡಿ ನಿವಾಸಿ 32ರ ಹರೆಯದ ಹರ್ಷಿತ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ತಲಪಾಡಿ ನಿವಾಸಿ ವಿಶ್ವನಾಥ್ – ಮೀನಾಕ್ಷಿ ದಂಪತಿ ಪುತ್ರರಾದ ಹರ್ಷಿತ್ ವಿದೇಶದಲ್ಲಿ ಶಿಪಿಂಗ್‌ನಲ್ಲಿ ಕಳೆದ ಮೂರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಮೂರು ತಿಂಗಳಿಗೊಮ್ಮೆ ರಜೆಯಲ್ಲಿ ಊರಿಗೆ ಬಂದಾಗಲೂ ಹಿಂದಿನ ಎಸಿ ಮೆಕ್ಯಾನಿಕ್ ಕೆಲಸವನ್ನು ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಊರಿಗೆ ಬಂದಿದ್ದ ಅವರು ಸಂಬAಧಿಗೆ ಎಸಿ ಮೆಕ್ಯಾನಿಕ್ ತರಬೇತಿ ನೀಡುವ ಸಲುವಾಗಿ ಮಾ.4 ರಂದು ಬೆಂಗಳೂರಿಗೆ ತೆರಳಿದ್ದರು. ಅಲ್ಲಿ ಬಹುಮಹಡಿ ಕಟ್ಟಡದಲ್ಲಿ ಫಿಟಿಂಗ್ ನಡೆಸುವ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಎರಡು ದಿನಗಳ ಕಾಲ ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಮಾ.7 ರಂದು ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆಂದು ಕರೆತರಲಾಗಿತ್ತು. ಆದರೆ ದಾರಿಮಧ್ಯೆ ಅವರು ಸಾವನ್ನಪ್ಪಿದ್ದಾರೆ. ಮೃತರು ತಂದೆ, ತಾಯಿ, ಪತ್ನಿ, ಸಹೋದರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ತಲಪಾಡಿ ಭಾಗದಲ್ಲಿ ಹಲವು ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡಿದ್ದ ಹರ್ಷಿತ್ ಭಜನಾ ಮಂದಿರ ಹಾಗೂ ದೇವಸ್ಥಾನದ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

Exit mobile version