ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ಮೇಲ್ಸೇತುವೆಯಿಂದ ಅಬ್ಬಕ್ಕ ಸರ್ಕಲ್ ತನಕದ 10ಕೋಟಿ ರೂ. ಮೊತ್ತದ ಯೋಜನೆಯ ಮೊದಲ ಹಂತದ ಕಾಮಗಾರಿಯ ರಸ್ತೆಯನ್ನು ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು.
ಈ ಸಂದರ್ಭ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್, ಉಳ್ಳಾಲ ನಗರ ಸಭೆ ಅಧ್ಯಕ್ಷೆ ಗಿರಿಜಾ ಎಂ.ಬಾೈ, ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಮುಕ್ಕಚ್ಚೇರಿ, ನಗರ ಸಭೆ ಸದಸ್ಯ ಫಾರೂಕ್ ಉಳ್ಳಾಲ್, ಉಸ್ಮಾನ್ ಕಲ್ಲಾಪು, ಮೊಹಮ್ಮದ್ ಮುಸ್ತಫಾ, ಸಲೀಂ, ಆಸಿಫ್ ಉಳ್ಳಾಲ, ಅಬ್ದುಲ್ ಅಜೀಝ್ ಹಕ್, ಅಹ್ಮದ್ ಬಾವಾ ಕೊಟ್ಟಾರ, ತಾಲೂಕು ಪಂಚಾಯತ್ ಸದಸ್ಯ ಮೊಹಮ್ಮದ್ ಮೋನು, ಗುತ್ತಿಗೆದಾರ ಸುಧಾಕರ್ ಪೂಂಜಾ ಉಪಸ್ಥಿತರಿದ್ದರು.