Site icon Ullalavani

ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ: ಹಾರೀಸ್ ಮಲಾರ್

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲದೇ ಇರುವುದರಿಂದ ರಕ್ತದಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಕೆಲಸ ಇನ್ನೂ ಕೂಡ ವ್ಯಾಪಕವಾಗಿ ನಡೆಯಬೇಕಾಗಿದೆ. ಅಪಘಾತ, ಹೆರಿಗೆಯ ಸಂದರ್ಭದಲ್ಲಿ ಬ್ಲಡ್ ಕ್ಯಾನ್ಸರ್, ಡೆಂಗ್ಯೂ ಮತ್ತು ಇನ್ನಿತರ ತುರ್ತು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದೆ ಎಂದು ಎಸ್‍ಡಿಪಿಐ ಮಂಗಳೂರು ವಿಧಾನಸಭಾ ಸದಸ್ಯ ಹಾರೀಸ್ ಮಲಾರ್ ಹೇಳಿದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಳ್ಳಾಲ ವಲಂiÀi ಹಾಗೂ ಕೆ. ಎಂ. ಸಿ ಆಸ್ಪತ್ರೆ ಮಂಗಳೂರು ಜಂಟಿ ಆಶ್ರಯದಲ್ಲಿ ಹಳೆಕೋಟೆಯ ಸೈಯದ್ ಮದನಿ ಪ್ರೌಢಶಾಲೆಯಲ್ಲಿ ನಡೆದ ಸಾರ್ವಜನಿಕ ರಕ್ತದಾನದ ಶಿಬಿರದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮಸ್ಜೀದುಲ್ ಅಲ್ ಕರೀಂ ಹಳೆಕೋಟೆ ಖತೀಬರಾದ ಉಸ್ಮಾನ್ ಸಅದಿ ದು:ಆ ನೆರವೇರಿಸಿದರು.

ಪಿಎಫ್‍ಐ ಹಳೆಕೋಟೆ ಘಟಕಾಧ್ಯಕ್ಷ ಪೈರೋಝ್ ಉಳ್ಳಾಲ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಕೆ.ಎಂ.ಸಿ. ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ. ಅಕ್ಷಯ್ ಕಾಂiÀರ್iಕ್ರಮ ಉದ್ಘಾಟಿಸಿದರು.

ಎಸ್.ಐ.ಓ. ಉಳ್ಳಾ¯ ಸೆಕ್ಟರ್ ಅಧ್ಯಕ್ಷ ಡಾ. ಝೈನುದೀನ್ ಅಳೇಕಲ, ಎಸ್‍ಡಿಪಿಐ ಉಳ್ಳಾಲ ನಗರ ಸಭಾಧ್ಯಕ್ಷ ಅಝ್ಗರ್ ಅಲಿ, ಹಳೆಕೋಟೆ ಘಟಕಾಧ್ಯಕ್ಷ ಅಬ್ದುಲ್ ರವೂಫ್, ಪಿಎಫ್‍ಐ ಮಂಗಳೂರು ಬ್ಲಡ್ ಬ್ಯಾಂಕ್ ಮುಖ್ಯಸ್ಥ ಇಲ್ಯಾಸ್ ಬಜ್ಪೆ, ಅಲ್ತಾಫ್, ನಝೀರ್ ಹಾಗೂ ಇಬ್ರಾಹಿಂ ಉಪಸ್ಥಿತರಿದ್ದರು.

ಅಬ್ದುಲ್ ರಝಾಕ್ ಕಾರ್ಯಕ್ರಮ ನಿರೂಪಿಸಿದರು. ಪಿಎಫ್‍ಐ ಉಳ್ಳಾಲ ವಲಯಾಧ್ಯಕ್ಷ ಅಬ್ಬಾಸ್ ಕಿನ್ಯ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.

ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ. ಅಕ್ಷಯ್ ಅವರು ಪೈರೋಝ್ ಉಳ್ಳಾಲ್ ಸ್ಮರಣಿಕೆ ನೀಡಿ ಗೌರವಿಸಿದರು.

Exit mobile version