Site icon Ullalavani

ಹರೇಕಳ ಆಲಡ್ಕ ಜಮಾಅತಿನ ಎರಡು ಮದ್ರಸಕ್ಕೆ ಶೇ.100 ಫಲಿತಾಂಶ

ಉಳ್ಳಾಲ: ಇಸ್ಲಾಮಿಕ್ ಎಜುಕೇಷನಲ್ ಬೋರ್ಡ್ ನಡೆಸಿದ 2025- 26ನೇ ಸಾಲಿನ 5,7,10,12 ತರಗತಿಗಳ ಪಬ್ಲಿಕ್ ಪರೀಕ್ಷಯಲ್ಲಿ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಬದ್ರಿಯಾ ಜುಮಾ ಮಸೀದಿ ಅಧೀನದ ಹಿದಾಯತುಲ್ ಇಸ್ಲಾಂ ಆಲಡ್ಕ ಮತ್ತು ತೋಕರಬೆಟ್ಟು ಮದ್ರಸವು ಶೇ.100 ಫಲಿತಾಂಶ ದಾಖಲಿಸಿದೆ.

ಆಲಡ್ಕ ಮದ್ರಸದ 5ನೇ ತರಗತಿಯ ಎಂಟು ವಿದ್ಯಾರ್ಥಿಗಳು, 7ನೇ ತರಗತಿಯ ಐವರು ವಿದ್ಯಾರ್ಥಿಗಳು ಮತ್ತು 10ನೇ ತರಗತಿಯ ಏಳು ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತೀರ್ಣರಾಗಿರುತ್ತಾರೆ. 10ನೇ ತರಗತಿಯಲ್ಲಿ ಮೂವರು ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತೀರ್ಣರಾಗಿರುತ್ತಾರೆ.

ತೋಕರಬೆಟ್ಟು ಮದ್ರಸದ 12ನೇ ತರಗತಿಯಲ್ಲಿ ಒಬ್ಬರು ವಿದ್ಯಾರ್ಥಿನಿ ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾಳೆ ಎಂದು ಮಸೀದಿಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version