Site icon Ullalavani

ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ

ಉಳ್ಳಾಲ್ ನ್ಯೂಸ್ ನೆಟ್ ವರ್ಕ್

ಉಳ್ಳಾಲ: ಉಳ್ಳಾಲ ಅನುದಾನಿತ ಮದನಿ ಪ್ರೌಢಶಾಲೆ ಅಳೇಕಲ ಉಳ್ಳಾಲ ಇಲ್ಲಿಯ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಸಂಸ್ಥೆಯ ಉಪಾಧ್ಯಕ್ಷ ಇಬ್ರಾಹಿಂ ಕಾಸಿಂ, ಉಳ್ಳಾಲ ಪುರಸಭಾ ಅಧ್ಯಕ್ಷೆ ಗಿರಿಜಾ ಬಾೈ ಸೈಕಲ್ ವಿತರಿಸಿದರು.

ಶಾಲೆಯ ಸಂಚಾಲಕ ಯು.ಕೆ. ಇಬ್ರಾಹಿಂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪುರಸಭಾ ಉಪಾಧ್ಯಕ್ಷೆ ರಜಿಯಾ ಇಬ್ರಾಹಿಂ, ಮದನಿ ಎಜ್ಯುಕೇಶನಲ್ ಎಸೋಸಿಯೇಶನ್ ಜೊತೆ ಕಾರ್ಯದರ್ಶಿ ಎ.ಎ. ಖಾದರ್, ಸಮಿತಿ ಸದಸ್ಯರಾದ ಯು.ಎ. ಇಸ್ಮಾಯಿಲ್, ಮದನಿ ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲ ಬಿ. ಮೂಸಾ, ಪ್ರಾಥಮಿಕ ಶಾಲೆಯ ಸಂಚಾಲಕ ಇಬ್ರಾಹಿಂ ಅಲಿಯಬ್ಬ, ಪ್ರಾಥಮಿಕ ವಿಭಾಗದ ಸಹ ಶಿಕ್ಷಕಿ ಮೀರಾ ಜೆ. ಉಪಸ್ಥಿತರಿದ್ದರು.

ಸಹ ಶಿಕ್ಷಕ ಇಬ್ರಾಹಿಂ ಪಿ. ಸ್ವಾಗತಿಸಿದರು. ದೈಹಿಕ ಶಿಕ್ಷಕ ಲೋಕನಾಥ ರೈ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ದೇವಪ್ಪ ಶೆಟ್ಟಿ ವಂದಿಸಿದರು.

Exit mobile version