Site icon Ullalavani

‘ಟೆಡ್ ಎಕ್ಸ್ ಸೇಂಟ್ ಅಲೋಶಿಯಸ್’ ಸಮ್ಮೇಳನ; ಪ್ರಾಧ್ಯಾಪಕ ಡಾ. ದೇವನ್ ಭಾಗಿ

ಮಂಗಳೂರು: ಮಂಗಳೂರಿನ ಎ.ಜೆ. ವೈದ್ಯಕೀಯ ಕಾಲೇಜಿನ ಇ.ಎನ್.ಟಿ (ENT) ವಿಭಾಗದ ಪ್ರಾಧ್ಯಾಪಕರಾದ ಡಾ. ದೇವನ್ ಅವರು ಇತ್ತೀಚೆಗೆ ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ನಡೆದ ಅತ್ಯಂತ ಪ್ರತಿಷ್ಠಿತ ‘ಟೆಡ್ ಎಕ್ಸ್ ಸೇಂಟ್ ಅಲೋಶಿಯಸ್’ (TEDxStAloysius) ಸಮ್ಮೇಳನದಲ್ಲಿ ಭಾಗಿಯಾಗಿದ್ದಾರೆ.



ಈ ಸಂದರ್ಭದಲ್ಲಿ ಅವರು, ತಾವು ಎದುರಿಸುತ್ತಿದ್ದ ಮಧುಮೇಹ (Diabetes), ರಕ್ತದೊತ್ತಡ (Hypertension) ಮತ್ತು ಬೊಜ್ಜಿನ (Obesity) ಸಮಸ್ಯೆಯನ್ನು ಸ್ವತಃ ಹೇಗೆ ಗುಣಪಡಿಸಿಕೊಂಡರು ಎಂಬ ತಮ್ಮ ಮಹತ್ವದ ಸಂಶೋಧನಾತ್ಮಕ ವಿಚಾರಗಳ ಬಗ್ಗೆ ಮಾತನಾಡಿದರು. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಈ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Exit mobile version