ಮಂಗಳೂರು, ಮಾ. 04 : ಜಿಲ್ಲಾದ್ಯಂತ ತಾಪಮಾನ ಹೆಚ್ಚುತ್ತಿದ್ದಂತೆಯೇ ಜಲಮೂಲಗಳಲ್ಲಿಯೂ ಒಳಹರಿವು ಕ್ಷೀಣಿಸಿದೆ. 2025ರ ಮಳೆಗಾಲದಲ್ಲಿ ಜಿಲ್ಲೆಯಾದ್ಯಂತ ಅತೀ ಹೆಚ್ಚು ಮಳೆಯಾಗಿದೆ.
ಹಾಗಾಗಿ ಹಲವು ತಾಲೂಕುಗಳಲ್ಲಿ ಅಂತರ್ಜಲ ಮಟ್ಟದಲ್ಲಿಯೂ ಏರಿಕೆಯಾಗಿದೆ. ಆದರೆ ಗ್ರಾಮೀಣ ಪ್ರದೇಶವಾದ ಪುತ್ತೂರು ಮತ್ತು ಮೂಡುಬಿದಿರೆಯಲ್ಲಿ ಮಾತ್ರ ಅಂತರ್ಜಲದಲ್ಲಿ ಕುಸಿತ ಕಂಡುಬಂದಿರುವುದು ಜಲಾಂತಕಕ್ಕೆ ಕಾರಣವಾಗಿದೆ.
