Site icon Ullalavani

ಇರಾನ್ ಮೇಲೆ ದಾಳಿ;ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನ ಸೇವೆಗಳಲ್ಲಿ ವ್ಯತ್ಯಯ…!!

ನವದೆಹಲಿ: ಯುದ್ಧ ಭೀತಿಯಿಂದ ಇರಾನ್ ದೇಶದ ವಾಯು ಮಾರ್ಗ ಮುಚ್ಚಿದ ಹಿನ್ನೆಲೆ ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ಹಲವು ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಹಲವು ವಿಮಾನಗಳ ಸಂಚಾರ ಸ್ಥಗಿತ ಹಾಗೂ ವಿಮಾನಗಳು ವಾಪಾಸ್ಸಾಗಿವೆ.

IX 831 (ಮಂಗಳೂರು-ದುಬೈ)
ವಿಮಾನ ಟೇಕಾಫ್ ಬಳಿಕ ಮತ್ತೆ ಮಂಗಳೂರು ಏರ್ಪೋರ್ಟ್ಗೆ ವಾಪಸ್ಸಾಗಿದೆ. ಮಧ್ಯಾಹ್ನ 3 ಗಂಟೆಗೆ ವಿಮಾನ ರದ್ದುಗೊಳಿಸಲಾಗಿದೆ ಎಂದು ಘೋಷಿಸಿದ್ದು, 174 ಪ್ರಯಾಣಿಕರು 6 ಸಿಬ್ಬಂದಿ ಸೇರಿ ಎಲ್ಲರು ಮತ್ತೆ ಸ್ವಸ್ಥಾನಕ್ಕೆ ವಾಪಸ್ಸಾದರು.

IX 821 (ಮಂಗಳೂರು-ದೋಹಾ)
ವಿಮಾನವನ್ನು ಮುಂಬೈ (ಃಔಒ)ಗೆ ಡೈವರ್ಟ್ ಮಾಡಲಾಗಿದೆ. 6ಇ 1467 (ಮಂಗಳೂರು–ದುಬೈ)ವಿಮಾನ ಸಂಪೂರ್ಣವಾಗಿ ರದ್ದಾಗಿದ್ದು, ಗಲ್ಫ್ ರಾಷ್ಟ್ರಗಳಿಂದ ಮಂಗಳೂರಿಗೆ ಆಗಮಿಸಲಿದ್ದ ಹಲವು ವಿಮಾನಗಳು ರದ್ದಾಗಿದೆ.

IX 822 (ದೋಹಾ–ಮಂಗಳೂರು) ವಿಮಾನ ರದ್ದು- ಆಗಮನ ಸಮಯ: 20:45

IX 832 (ದುಬೈ–ಮಂಗಳೂರು) – ಆಗಮನ ಸಮಯ: 22:10

ಮಂಗಳೂರಿನಿAದ ಗಲ್ಫ್ ರಾಷ್ಟ್ರಗಳಿಗೆ ಹೊರಡಲಿದ್ದ ಎಲ್ಲಾ ವಿಮಾನಗಳು ರದ್ದು

IX 831 (ಮಂಗಳೂರು–ದುಬೈ) – ಹೊರಡಲಿದ್ದ ಸಮಯ: 13:20

IX 847 (ಮಂಗಳೂರು–ದಮ್ಮಾಮ್) – ಹೊರಡಲಿದ್ದ ಸಮಯ: 23:10

IX 813 (ಮಂಗಳೂರು–ದುಬೈ) – ಹೊರಡಲಿದ್ದ ಸಮಯ: 20:15

IX 851 (ಮಂಗಳೂರು–ಕುವೈತ್) – ಹೊರಡಲಿದ್ದ ಸಮಯ: 22:05

IX 815 (ಮಂಗಳೂರು–ಅಬುಧಾಬಿ) – ಹೊರಡಲಿದ್ದ ಸಮಯ: 23:20

6E 1467 (ಮಂಗಳೂರು–ದುಬೈ) – ಹೊರಡಲಿದ್ದ ಸಮಯ: 19:15

ಇರಾನ್ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿರುವುದರಿಂದ ವಿಮಾನ ಸೇವೆ ರದ್ದಾಗಿದೆ.ಮಧ್ಯಪ್ರಾಚ್ಯದ ಕಡೆಗೆ ಹೋಗುವ ವಿಮಾನಗಳಿಗೆ ನೇರ ಮಾರ್ಗ ಲಭ್ಯವಿಲ್ಲ. ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಉದ್ಭವಿಸಿರುವ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು ಆ ಪ್ರದೇಶಗಳಿಗೆ ತೆರಳುವ ತನ್ನ ಎಲ್ಲಾ ವಿಮಾನ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಏರ್ ಇಂಡಿಯಾ ತಿಳಿಸಿದೆ.

Exit mobile version