ಕಾಸರಗೋಡು; ಚಂದ್ರಗಿರಿ ಕೊಪ್ಪಲು ಶ್ರೀ ಮಹಮ್ಮಾಯಿ ಅಮ್ಮನವರ ದೇವಳದಲ್ಲಿ ಎಪ್ರಿಲ್ 4 ಮತ್ತು 5ರಂದು ನಡೆಯಲಿರುವ 55ನೇ ಪ್ರತಿಷ್ಠಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ದೇವಳದ ಅಧ್ಯಕ್ಷರಾದ ಲೋಕೇಶ್ ಕೊಪ್ಪಲು, ಕಾರ್ಯದರ್ಶಿ ಸೀತಾರಾಮ ಕೊಪ್ಪಲು, ಖಜಾಂಚಿ ಬಾಲಕೃಷ್ಣ ಪರಿಯಾರ, ಜೊತೆ ಕಾರ್ಯದರ್ಶಿ ಸುರೇಶ್ ತೋಟ, ಸತೀಶ್ ಪರಿಯಾರ, ಅರ್ಚಕ ದಯಾನಂದ ಕೊಪ್ಪಲು, ಹಿರಿಯ ಸದಸ್ಯರಾದ ಸತೀಶ್ ಕೆ. ದೇರೆಬೈಲು, ರವೀಂದ್ರ ಸಿಹೆಚ್. ಕೊಪ್ಪಲು, ಜನಾರ್ಧನ ಪರಿಯಾರ, ಉಮೇಶ್ ಕೆ. ತುಂಗಾನಗರ, ಪ್ರವೀಣ್ ಕೊಪ್ಪಲು,ನವೀನ್ ಕಾಪಿಕಾಡು ಉಳ್ಳಾಲ, ಪ್ರಕಾಶ್ ಮುಕ್ಕೋಟ್ಟು, ಬಾಲಕೃಷ್ಣ ಕಿನ್ಯ, ಮಂಗಳೂರು ಲಕ್ಷ್ಮಣಾನಂದ ಸೊಸೈಟಿಯ ನಿರ್ದೇಶಕರಾದ ಜೈರಾಜ್, ಕೆ. ಸಿ. ನಾಗೇಶ್ ಕೊಂಡಾಣ, ಪ್ರಶಾಂತ್, ಸಂಜಯ್, ಸಚಿತ್ ನಾಯಕ್ ಶಾಂತರಾಮ, ವೀಣಾ ಕೊಪ್ಪಲು, ಸ್ವಾತಿ ಕೊಪ್ಪಲ್ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.
ಈ ಉತ್ಸವದ ಸಮಯ ದೇವಳದಲ್ಲಿ ಆಚರಿಸಲಾಗುವ ಕೊಪ್ಪಲು ಶ್ರೀ ಗುಳಿಗ, ಶ್ರೀ ವಿಷ್ಣುಮೂರ್ತಿ, ಶ್ರೀ ದೂಮಾವತಿ, ಶ್ರೀ ವೆಂಕಟರಮಣ ಮುಡಿಪು ಪೂಜೆ, ಸ್ವಜಾತಿ ಭಾಂದವರ ವಟುಗಳಿಗೆ ಸಾಮೂಹಿಕ ಉಚಿತ ಬ್ರಹ್ಮ್ಮೋಪದೇಶ, ಹಿರಿಯರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಇತರ ಶೈಕ್ಷಣಿಕ ಪುರಸ್ಕಾರಗಳನ್ನು ಪಡೆದವರಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಅಧ್ಯಕ್ಷ ಲೋಕೇಶ್ ಕೊಪ್ಪಲ್ ಮತ್ತು ಕಾರ್ಯದರ್ಶಿ ಸೀತಾರಾಮ ಕೊಪ್ಪಲು ಸಭೆಗೆ ಒದಗಿಸಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸಲು ವಿನಂತಿಸಿಕೊAಡಿದ್ದಾರೆ.
