ಶಾಲಾ ಶಿಕ್ಷಣ ಇಲಾಖೆ ,ಜಿಲ್ಲಾ ಉಪ ನಿರ್ದೇಶಕರ ಕಚೇರಿ ಕೊಡಗು ಜಿಲ್ಲೆ ಇದರ ಸಹಯೋಗದಲ್ಲಿ ಅಮ್ಮತ್ತಿಯಲ್ಲಿ ನಡೆದ 17ರ ವಯೋಮಿತಿಯ ಬಾಲಕಿಯರ ರಾಜ್ಯಮಟ್ಟದ ಫುಟ್ಬಾಲ್ ಪಂದ್ಯಾಟದಲ್ಲಿ ಮೈಸೂರು ವಿಭಾಗವು ವಿಜೇತರಾಗಿದ್ದು, ಮೈಸೂರು ವಿಭಾಗದ ತಂಡದಲ್ಲಿ ಶೀತಲ್. ಎಸ್ ಇವರು ಉತ್ತಮ ಪ್ರದರ್ಶನ ನೀಡಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಾರ್ಖಂಡಿನ ರಾಂಚಿ ಯಲ್ಲಿ ನಡೆದ ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿರುತ್ತಾರೆ. ಇವರು ಸಂಧ್ಯಾ ಮತ್ತು ಸಂಜಯ್ ಅವರ ಪುತ್ರಿಯಾಗಿರುತ್ತಾರೆ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಸಂದೀಪ್ ರಾಜ್ ಮಾಡೂರು ಇವರಿಂದ ಫುಟ್‍ಬಾಲ್ ತರಬೇತಿಯನ್ನು ಪಡೆದಿರುತ್ತಾರೆ.