Site icon Ullalavani

ಮುಡಿಪಿನಲ್ಲಿ “ಗೋ ಗ್ಯಾಸ್” ವಿಶೇಷ ಹೊಸ ವರ್ಷದ ಆಫರ್


ಮುಡಿಪು: ಮುಡಿಪು ಪ್ರದೇಶದ “ಗೋ ಗ್ಯಾಸ್” ಸಂಸ್ಥೆಯಿಂದ ಹೊಸ ವರ್ಷದ ಪ್ರಯುಕ್ತ ಗ್ರಾಹಕರಿಗಾಗಿ ವಿಶೇಷ ಆಫರ್ ಘೋಷಿಸಲಾಗಿದೆ. ಈ ವಿಶೇಷ ಯೋಜನೆಯಡಿ 100 ರೂಪಾಯಿ ಮೌಲ್ಯದ ಗ್ಯಾಸ್ ಖರೀದಿಸಿದಲ್ಲಿ ಗ್ರಾಹಕರಿಗೆ 10 ರೂಪಾಯಿ ಮೌಲ್ಯದ ಗ್ಯಾಸ್ ಉಚಿತವಾಗಿ ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.
ಹೊಸ ವರ್ಷದ ಸಂಭ್ರಮದ ಅಂಗವಾಗಿ ಪರಿಚಯಿಸಲಾದ ಈ ಆಫರ್ ಮೂಲಕ ಗ್ರಾಹಕರು ಹೆಚ್ಚು ಪ್ರಯೋಜನ ಪಡೆಯಬಹುದಾಗಿದೆ. ಗೃಹಬಳಕೆಯ ಗ್ಯಾಸ್ ಖರೀದಿಯಲ್ಲಿ ಸ್ವಲ್ಪ ಉಳಿತಾಯದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಆಫರ್ ಕುರಿತು ಹೆಚ್ಚಿನ ಮಾಹಿತಿಗಾಗಿ 57359 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಲು ಮನವಿ ಮಾಡಲಾಗಿದೆ.

Exit mobile version