Site icon Ullalavani

ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆಯಲ್ಲಿ ಬ್ರಹ್ಮಶ್ರೀ ನಿಲಯಕ್ಕೆ ವಿದ್ಯುತ್ ಸಂಪರ್ಕ – ದಾನಿಗಳಿಗೆ ಕೃತಜ್ಞತೆ


ಮುಡಿಪು: ಬಾಳೆಪುಣಿ ಗ್ರಾಮದ ಕುಕ್ಕುದಕಟ್ಟೆ ಪ್ರದೇಶದಲ್ಲಿರುವ ‘ಬ್ರಹ್ಮಶ್ರೀ ನಿಲಯ’ ಮನೆಗೆ ವಿದ್ಯುತ್ ಸಂಪರ್ಕ ಒದಗಿಸುವುದರ ಜೊತೆಗೆ, ಮನೆಗೆ ಕಿಟಕಿ–ಬಾಗಿಲು ಅಳವಡಿಸಲು ಅಗತ್ಯವಾದ ಆರ್ಥಿಕ ಸಹಾಯ ನೀಡಿದ ಸಹೃದಯಿ ದಾನಿಗಳಿಗೆ ಕೃಷ್ಣಮ್ಮ ರಂಗನಾಥ್ ಕುಕ್ಕದಕಟ್ಟೆ ಸೈಟ್ ಅವರು ಹೃದಯಾಂತರಾಳದ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.
ಮನೆಯ ಮೂಲಭೂತ ಸೌಕರ್ಯಗಳ ಕೊರತೆಯನ್ನು ಮನಗಂಡು, ಸಮಾಜಮುಖಿ ಚಿಂತನೆಯೊಂದಿಗೆ ದಾನಿಗಳು ಒಗ್ಗೂಡಿ ಸಹಾಯಹಸ್ತ ಚಾಚಿರುವುದು ಶ್ಲಾಘನೀಯವಾಗಿದೆ. ವಿಶೇಷವಾಗಿ ಸರಕಾರಿ ಪ್ರೌಢಶಾಲೆ ಮುಡಿಪು ಕುರ್ನಾಡು ಇದರ 2000–2001ನೇ ಸಾಲಿನ ಹಳೆ ವಿದ್ಯಾರ್ಥಿಗಳು ಒಂದಾಗಿ ಮಾನವೀಯತೆ ಮೆರೆದಿರುವುದು ಗಮನಾರ್ಹವಾಗಿದೆ.
ಸಹಾಯ ಮಾಡಿದ ದಾನಿಗಳಲ್ಲಿ ಶಿಲ್ಪಾ ಪೂಜಾರಿ (ತೊಕ್ಕೊಟ್ಟು), ನೃತ್ಯ ಶೆಟ್ಟಿ (ಮುಂಬಯಿ), ಚೈತ್ರಾ ಪೂಜಾರಿ (ದುಬೈ), ಆಸಿಫ್ ಫಜೀರು, ಮಿಲನ್ ಪೂಜಾರಿ (ಬೆಂಗಳೂರು), ಹಂಝ (ದುಬೈ), ಮನೋಜ್ ಶೆಟ್ಟಿ (ಕೆಳಗಿನ ನಾರ್ಯ), ದಿವ್ಯರಾಜ್ ಶೆಟ್ಟಿ (ತೊಕ್ಕೊಟ್ಟು), ರಾಜೀವ ಪೂಜಾರಿ (ದುಬೈ), ಸಿದ್ಧಿಕ್ ಮೂಳೂರು, ವಿದ್ಯಾಧರ ಶೆಟ್ಟಿಗಾರ್ (ತಲೆಕ್ಕಿ), ರಾಜೇಶ್ ದುರ್ಗಾಲಾಪು (ಸೈಟ್), ಗಣೇಶ್ ಸಾಲಿಯಾನ್ಸ್ – ದಿಶಾ ಎಲೆಕ್ಟಿಕಲ್ (ಬೋಳ್ಯಾರು), ಕೆ.ಎಚ್. ಸಿದ್ದಿಕ್ (ಮುಡಿಪು), ಲೋಹಿತ್ (ಅಯೋಧ್ಯ ನಗರ), ರಾಘವ ಎನ್.ಬಿ (ನಾರ್ಯ), ಪ್ರಮೋದ್ ಪೂಜಾರಿ (ಸಜೀಪ), ಭಾಸ್ಕರ ಜೋಗಿ (ಕಣಂತೂರು), ಬಾಲಕೃಷ್ಣ ಪೂಜಾರಿ (ಮುದುಂಗಾರು), ರಾಜೇಶ್ ನಾಯಕ್ (ಮುಡಿಪು), ಜಯರಾಜ್ ಪೂಜಾರಿ (ಬಾಕ್ರಬೈಲು), ಹರ್ಷದೀಪ್ (ನಾರ್ಯ) ಹಾಗೂ ಅಶ್ವಥ್ ಪೂಜಾರಿ (ಚಕ್ರಕೋಡಿ) ಸೇರಿದ್ದಾರೆ. ಸಮಾಜದ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಅಗತ್ಯ ಸೌಕರ್ಯ ಒದಗಿಸಲು ಕೈಜೋಡಿಸಿದ ಎಲ್ಲ ದಾನಿಗಳ ಈ ಸೇವಾಭಾವಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Exit mobile version