Site icon Ullalavani

ಉಳ್ಳಾಲವಾಣಿ ವರದಿ ಫಲಶ್ರುತಿ; ನಾಯಿ ದಾಳಿಗೆ ಬಲಿಯಾದ ದಯಾನಂದ ಕುಟುಂಬಕ್ಕೆ 5 ಲಕ್ಷ ಪರಿಹಾರ

ಉಳ್ಳಾಲ ; ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕುಂಪಲ ಮೂರುಕಟ್ಟೆ ಪ್ರದೇಶದಲ್ಲಿ ನಾಯಿ ಕಚ್ಚಿದ ಪರಿಣಾಮವಾಗಿ ಮೃತಪಟ್ಟ ದಯಾನಂದ (60) ಅವರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗಿದೆ.


ಘಟನೆಯ ಬಳಿಕ ಪೊಲೀಸರು ಹಾಗೂ ವಿಧಿವಿಜ್ಞಾನ ತಂಡ (FSL) ಸ್ಥಳ ಪರಿಶೀಲನೆ ನಡೆಸಿ, ಇದು ಬೀದಿ ನಾಯಿಗಳ ದಾಳಿ ಎಂಬುದನ್ನು ದೃಢಪಡಿಸಿದ್ದರು. ಈ ಬಗ್ಗೆ ಉಳ್ಳಾಲವಾಣಿ ವರದಿ ಪ್ರಕಟವಾಗಿ ಸರಕಾರದ ಹಾಗೂ ಸ್ಥಳೀಯ ಆಡಳಿತದ ಗಮನ ಸೆಳೆದಿತ್ತು.


ಇದೀಗ ಉಳ್ಳಾಲ ಪುರಸಭೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೃತರ ಕುಟುಂಬಕ್ಕೆ ಪರಿಹಾರದ ಚೆಕ್ ಹಸ್ತಾಂತರಿಸಲಾಯಿತು. ಪುರಸಭೆಯ ಮುಖ್ಯಾಧಿಕಾರಿ, ಅಧ್ಯಕ್ಷೆ ಕಮಲಾ, ಉಪಾಧ್ಯಕ್ಷ ರವಿಶಂಕರ್ ಸೋಮೇಶ್ವರ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಹಾಗೂ ವಾರ್ಡ್ ಕೌನ್ಸಿಲರ್ ಮನೋಜ್ ಕುಮಾರ್ ಉಪಸ್ಥಿತರಿದ್ದರು.
ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿ ನಾಯಿಗಳ ಸಮಸ್ಯೆ ಹೆಚ್ಚುತ್ತಿರುವ ಬಗ್ಗೆ ಉಳ್ಳಾಲವಾಣಿ ವರದಿ ಪ್ರಕಟಿಸಿದ್ದು, ದಯಾನಂದ ಗಟ್ಟಿಯವರಿಗೆ ಪರಿಹಾರ ದೊರಕಿದಂತಾಗಿದೆ.

Exit mobile version