Site icon Ullalavani

ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ ಕೊರಗಜ್ಜನಿಗೆ ದೊಂದಿ ಬೆಳಕಿನ ಕೋಲ ಸೇವೆ

ಉಳ್ಳಾಲ; ತೊಕ್ಕೊಟ್ಟು ಶಿವಾಜಿ ಫ್ರೆಂಡ್ಸ್ ಸರ್ಕಲ್ ಕೊರಗಜ್ಜನಿಗೆ ದೊಂದಿ ಬೆಳಕಿನ ಕೋಲ ಸೇವೆ ವಿಜೃಂಭಣೆಯಿoದ ನಡೆದಿದೆ. ತುಳುನಾಡಿನ ಕಾರ್ಣಿಕ ದೈವ ಕೊರಗಜ್ಜನ ಈ ಸ್ಥಳ ಹಿಂದು-ಮುಸ್ಲಿo-ಕ್ರೈಸ್ತರ ಭಾವೈಕ್ಯತೆಗೆ ಸಾಕ್ಷಿಯಾಗಿದೆ.

ಈ ವೇಳೆ ಗೌರವ ಅಧ್ಯಕ್ಷರಾದ ಸಿರಿಲ್ ರಾಬರ್ಟ್ ಡಿ’ಸೋಜ ಮಾತನಾಡಿ, ಸ್ವಾಮಿ ಕೊರಗಜ್ಜ ಸೇವಾ ಸಮಿತಿ ವತಿಯಿಂದ ಕಳೆದ 11ವರ್ಷಗಳಿಗೆ ವರ್ಷಾವಧಿ ಕೋಲ ನಡೆಸುತ್ತಿದ್ದೇವೆ. ಕೊರಗಜ್ಜ ದೈವದ ದೊಂದಿಬೆಳಕಿನ ಕೋಲಸೇವೆ ವಿಶೇಷವಾಗಿದ್ದು, ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಈಗಾಗಲೇ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಂಸ್ಥೆಯಾಗಿರುವ ಶಿವಾಜಿ ಫ್ರೇಂಡ್ಸ್ ಸುವರ್ಣ ಮಹೋತ್ಸದತ್ತ ಹೆಜ್ಜೆಇಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ದೈವಿಕ ಕಾರ್ಯದಲ್ಲಿ ಭಕ್ತಾದಿಗಳು ಆಗಮಿಸಿ, ಅನ್ನಸಂತರ್ಪಣೆ ಸ್ವೀಕರಿಸಿ, ದೊಂದಿಬೆಳಕಿನ ಕೊರಗಜ್ಜನ ಕೋಲಸೇವೆಯನ್ನು ಕಣ್ತುಂಬಿಕೊoಡಿದ್ದಾರೆ.

ಈ ಸಂದರ್ಭದಲ್ಲಿ ಸದಾನಂದ ಒಂಬತ್ತುಕೆರೆ, ಮಾಜಿ ಕಾರ್ಯದರ್ಶಿ ಚಂದ್ರಶೇಖರ ಉಚ್ಚಿಲ್, ಮಾಜಿ ಗೌರವ ಅಧ್ಯಕ್ಷರಾದ ಕೇಶವ ಭಟ್ನಗರ, ಸಂಘದ ಪ್ರಧಾನ ಕಾರ್ಯದರ್ಶಿ ರೋಹನ್ ತೊಕ್ಕೊಟ್ಟು ಉಪಸ್ಥಿತರಿದ್ದರು.

Exit mobile version