Site icon Ullalavani

ಬಸ್ ದುರಂತದಲ್ಲಿ ಮೃತಪಟ್ಟ ಆಟೋ ಚಾಲಕನ ಕುಟುಂಬಕ್ಕೆ ಯೂನಿಯನ್ ನಿಂದ ನೆರವು

ಉಳ್ಳಾಲ: ಇತ್ತೀಚೆಗೆ ತಲಪಾಡಿಯಲ್ಲಿ ಸಂಭವಿಸಿದ ಬಸ್ ದುರಂತದಲ್ಲಿ ಮೃತಪಟ್ಟ ದಕ್ಷಿಣ ಕನ್ನಡ ಜಿಲ್ಲಾ ಆಟೋ ರಾಜಾಕಮ್ಮಾರ್ ಯೂನಿಯನ್ ಸದಸ್ಯ ಹೈದರ್ ಅಲಿ ಅವರ ಕುಟುಂಬಕ್ಕೆ ಯೂನಿಯನ್ ವತಿಯಿಂದ ಧನಸಹಾಯ ಹಸ್ತಾಂತರಿಸಲಾಯಿತು.


ಆಟೋ ಚಾಲಕರು, ವ್ಯಾಪಾರಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಸಂಗ್ರಹಿಸಲಾದ ಒಟ್ಟು 4,60,000 ರೂ.ಗಳನ್ನು ಚೆಕ್ ಮೂಲಕ ಕುಟುಂಬದವರಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆಟೋ ರಾಜಾಕಮ್ಮಾರ್ ಯೂನಿಯನ್ ಸ್ಥಾಪಕಾಧ್ಯಕ್ಷ ಸಿದ್ದೀಕ್ ಕೊಡಕ್ಕಲ್, ಹೈದರ್ ಅಲಿ ಅವರಿಗೆ ನಾಲ್ಕು ಸಣ್ಣ ಪ್ರಾಯದ ಮಕ್ಕಳು ಇದ್ದು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಈ ಹಿನ್ನೆಲೆ ಎಲ್ಲರ ಸಹಕಾರದಿಂದ ಸಂಗ್ರಹಿಸಿದ ಮೊತ್ತವನ್ನು ಕುಟುಂಬಕ್ಕೆ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯೂನಿಯನ್ ಅಧ್ಯಕ್ಷ ಅಬ್ದುಲ್ ಜಲೀಲ್ ಕೆ., ಪ್ರಧಾನ ಕಾರ್ಯದರ್ಶಿ ಶಫೀಕ್ ಬೋಳಿಯಾರ್, ಹಣಕಾಸು ಕಾರ್ಯದರ್ಶಿ ಇಕ್ಬಾಲ್ ಮಾಡೂರ್, ಉಪಾಧ್ಯಕ್ಷ ಮನ್ಸೂರ್,ಕಾರ್ಯದರ್ಶಿ ಶಫೀಕ್ ಸೇರಿದಂತೆ ಪದಾಧಿಕಾರಿಗಳು ಶರೀಫ್, ಸಿರಾಜ್, ಅಬ್ಬಾಸ್, ಯೂಸುಫ್, ನಿಸಾರ್, ಸಾಧಿಕ್ ಹಾಗೂ ಕಾರ್ಯನಿರ್ವಾಹಕರು ರಿಝ್ವಾನ್, ತಾಸೀನ್, ಉಸ್ಮಾನ್, ಶಾಫೀ, ಹಾರಿಸ್,ಸಮೀರ್, ಇಮ್ರಾನ್, ರಝಾಕ್, ಅಬ್ದುಲ್ಲ ಕೆದುಂಬಾಡಿ ಮತ್ತಿತರರು ಉಪಸ್ಥಿತರಿದ್ದರು.

Exit mobile version