ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಎತ್ತಿನಹೊಳೆ ಯೋಜನೆ ಮೂಲಕ ನೇತ್ರಾವತಿ ನದಿ ತಿರುವು ಯೋಜನೆಯನ್ನು ಕಾರ್ಯಗತಗೊಳಿಸುವ ಈ ಯೋಜನೆ ಭ್ರಷ್ಠಾಚಾರದ ಯೋಜನೆಯಾಗಿದ್ದು, ಪರಿಸರಕ್ಕೆ ವಿರುದ್ಧವಾಗಿರುವ ಈ ಯೋಜನೆಯ ವಿರುದ್ಧ ಜನರು ಜಾಗೃತರಾಗಿ ಹೋರಾಟ ನಡೆಸಬೇಕು ಎಂದು ರಾಜ್ಯ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಅಬಿಪ್ರಾಯಪಟ್ಟರು.
ಅವರು ತೊಕ್ಕೊಟ್ಟು ಜಂಕ್ಷನ್‍ನಲ್ಲಿ ತುಳುನಾಡು ರಕ್ಷಣಾ ವೇದಿಕೆ ಇದರ ಆಶ್ರಯದಲ್ಲಿ ನೇತ್ರಾವತಿ ನದಿ ಉಳಿಸಿ ಅಭಿಯಾನದ ರಥಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಥಯಾತ್ರೆಯ ರುವಾರಿ ಮತ್ತು ತುಳುನಾಡು ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಮಾತನಾಡಿ ಕಳೆದ ನಾಲ್ಕು ದಿನಗಳಿಂದ ಎತ್ತಿನ ಹೊಳೆ ಯೋಜನೆಯ ವಿರುದ್ಧ ದ.ಕ.ಜಿಲ್ಲಾದ್ಯಾಂತ ಜನಜಾಗೃತಿ ಮೂಡಿಸುವ ಉದ್ಧೇಶದಿಂದ ರಥಯಾತ್ರೆಯನ್ನು ಆರಂಭಿಸಿದ್ದು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಕರಪತ್ರವನ್ನು ಜನರಿಗೆ ತಲುಪಿಸುವ ಮೂಲಕ ನೇತ್ರಾವತಿ ನದಿ ಉಳಿಸಿ ಅಭಿಯಾನ ಯಶಸ್ವಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಡಾ. ಕೆ.ಎ.ಮುನೀರ್ ಬಾವ, ಪ್ರ. ಕಾರ್ಯದರ್ಶಿ ಹಮೀದ್ ಹಸನ್ ಮಾಡೂರು, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಜ್ಯೋತಿಕಾ ಜೈನ್, ವಿಜಯ ನಾಯರ್, ಫಾರೂಕ್ ಕಿನ್ಯ, ಕೃಷ್ಣ ಶೆಟ್ಟಿ ಪಿಲಾರ್, ಎಂ.ಜಿ. ರಹೀಂ, ಸಿರಾಜ್ ಅಡ್ಕರೆ, ಅಸ್ಗರ್ ಮುಡಿಪು ಮತ್ತಿತರರು ಉಪಸ್ಥಿತರಿದ್ದರು.