Site icon Ullalavani

ಕರಾವಳಿಯ ಶಿಖಾ ಸುಶೀಲ್ ಮುಡಿಗೇರಿದ ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್-2026 ಕಿರೀಟ

ಮಂಗಳೂರು: ಪ್ರತಿಷ್ಟಿತ ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್-2026 ಕಿರೀಟವನ್ನು ಮಂಗಳೂರಿನ ಶಿಖಾ ಸುಶೀಲ್ ಮುಡಿಗೇರಿಸಿಕೊಂಡಿದ್ದಾರೆ.

ಮಂಗಳೂರಿನ ಮಿಲಾಗ್ರಿಸ್ ಸಭಾಭವನದಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಶಿಖಾ ಸುಶೀಲ್ ಇವರನ್ನ ವಿಜೇತರೆಂದು ಘೋಷಿಸಲಾಯಿತು.

ಸೆರೆನಾ ಎವ್ಜಿನ್ ಪ್ರಥಮ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡರೆ ಫೇ ಮಾರ್ಟಿಸ್ ದ್ವಿತೀಯ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದರು.

ದೇಶ ವಿದೇಶಗಳಿಂದ ಸಾವಿರಕ್ಕಿಂತಲೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದ ಈ ಸೌಂದರ್ಯ ಸ್ಪರ್ಧೆಯಲ್ಲಿ ದ್ವಿತೀಯ ಹಂತಕ್ಕೆ ಇಪ್ಪತ್ತೈದು ಸ್ಪರ್ಧಿಗಳು ಆಯ್ಕೆಯಾಗಿದ್ದರು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಆತ್ಮಸ್ಥೈರ್ಯ, ಸ್ವ ಪರಿಚಯಿಸುವಿಕೆ, ರೇಂಪ್ ವಾಕ್, ಪ್ರಶ್ನೋತ್ತರಿ, ಹಾಗೂ ಎಕ್ಸ್ ಫಾಕ್ಟರ್ ವಿಭಾಗಳಲ್ಲಿ ಮಿಂಚಿದ ಶಿಖಾ ಸುಶೀಲ್, ಹಿಸ್ನಾ ಮಿಸ್ಸ್ ದಾಯ್ಜಿವರ್ಲ್ಡ್ ಕಿರೀಟಕ್ಕೆ ಭಾಜನರಾದರು. ಹಿಸ್ನಾ ಇಂಟರ್ ನ್ಯಾಶನಲ್ ನಿರ್ದೇಶಕರಾದ ರೊನಾಲ್ಡ್ ಪಿಂಟೊ , ಪತ್ನಿ ದೊರೊತಿ ಪಿಂಟೊ, ವಿಜೇತರನ್ನು ಕಿರೀಟದ ಜೊತೆಗೆ ತಲಾ ಮೂರು, ಎರಡು ಹಾಗೂ ಒಂದು ಲಕ್ಷದ ನಗದು ಬಹುಮಾನಗಳನ್ನು ನೀಡಿ ಗೌರವಿಸಿದರು. ಅಂತಿಮ ಸುತ್ತಿಗೆ ಪ್ರವೇಶಿಸಿದ ಇತರ ಒಂಭತ್ತು ಸ್ಪರ್ಧಿಗಳು ವೈಯುಕ್ತಿಕ ಬಿರುದುಗಳೊಂದಿಗೆ ತಲಾ ಇಪ್ಪತ್ತೈದು ಸಾವಿರ ನಗದನ್ನು ಪಡೆದುಕೊಂಡರು.

Exit mobile version