Site icon Ullalavani

ಪೆದಮಲೆ ಬಂಡಿ ನೇಮೋತ್ಸವ ‘ ಪೂರ್ವಭಾವಿಯಾಗಿ ನಡೆದ `ಕೋಳಿಕುಂಟ’

ಮಂಗಳೂರು;ನೀರುಮಾರ್ಗ ಗ್ರಾಮದ ಪೆದಮಲೆಯಲ್ಲಿ ಐದು ಗ್ರಾಮಗೊಳಪಟ್ಟ ಧ್ವಜವೇರಿ ನಡೆಯುವ ಮಾಗಣೆ ದೈವಗಳಾದ ಶ್ರೀ ವಾಜಿಲ್ಲಾಯ – ಧೂಮಾವತಿ ದೈವಸ್ಥಾನದಲ್ಲಿ ಫೆ.19ರಿಂದ ಫೆ.21ರವರೆಗೆ ಪೆದಮಲೆ ವರ್ಷಾವಧಿ ಬಂಡಿ ನೇಮೋತ್ಸವ ನಡೆಯಲಿದೆ. ಈ ಹಿನ್ನಲೆ ಈಗಾಗಲೇ ಕ್ಷೇತ್ರದಲ್ಲಿ ಕೋಳಿಕುಂಟ ನಡೆದಿದೆ.

ಈ ಸಂದರ್ಭ ಅಶ್ವಿನ್ ಶೆಟ್ಟಿ ಬೊಂಡAತಿಲ ಗುತ್ತು ಅವರು ಮಾತನಾಡಿ, ಪ್ರಶ್ನಾ ಚಿಂತನೆ ಪ್ರಕಾರ ತಿಳಿದು ಬಂದAತೆ ದೈವಗಳಿಗೆ ದೈವಸ್ಥಾನ ನಿರ್ಮಾಣಗೊಂಡು ಒಂದು ವರ್ಷ ಕಳೆದಿದೆ. ಇದೀಗ ಕಾಲಾವಧಿ ನೇಮೋತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ ಕೋಳಿಕುಂಟ ನಡೆದಿದೆ. ಫೆ.19ರಂದು ಬೆಳಗ್ಗೆ 9.00ರಿಂದ ದೈವಸ್ಥಾನದ ನಾಗಬನದಲ್ಲಿ ನಾಗತಂಬಿಲ, ಸಂಜೆ 5.00ರಿಂದ ನೀರುಮಾರ್ಗ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಿAದ ದೈವಸ್ಥಾನಕ್ಕೆ ಹೊರೆಕಾಣಿಕೆ, ಸಂಜೆ 6.00ರಿಂದ ದೈವಸ್ಥಾನದ ಭಂಡಾರಮನೆಯಲ್ಲಿ ನವಕ ಕಲಶ ಶುದ್ಧ ಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಬಳಿಕ ಶ್ರೀ ವಾಜಿಲ್ಲಾಯ- ಧೂಮಾವತಿ ದೈವಸ್ಥಾನ ಟ್ರಸ್ಟ್ನ ಅಧ್ಯಕ್ಷರಾದ ಗಿರಿಧರ್ ಶೆಟ್ಟಿ ಮಾತನಾಡಿ, ದೈವಸ್ಥಾನದ ತಂತ್ರಿಗಳಾದ ವೇದಮೂರ್ತಿ ಬ್ರಹ್ಮಶ್ರೀ ಕುಡುಪು ಕೃಷ್ಣರಾಜ ತಂತ್ರಿಗಳ ಮಾರ್ಗದರ್ಶನದಲ್ಲಿ ದೈವಿಕ ವಿಧಿವಿಧಾನಗಳು ನಡೆಯಲಿದೆ. ಫೆ.20ರಂದು ಬೆಳಗ್ಗೆ 9.00ಕ್ಕೆ ದೈವಸ್ಥಾನದ ಭಂಡಾರಮನೆಯಿAದ ಭಂಡಾರ ಹೊರಡುವುದು, ಬೆಳಗ್ಗೆ 11.00 ಗಂಟೆಗೆ ಕೊಡಿಮರ ಏರುವುದು, ಮಧ್ಯಾಹ್ನ 12.00ಕ್ಕೆ ಮಹಾ ಅನ್ನ ಸಂತರ್ಪಣೆ, ರಾತ್ರಿ 7.00ರಿಂದ ಶ್ರೀ ಮಹಿಷಾಂದಾಯ ದೈವದ ನೇಮ, ರಾತ್ರಿ 8.00ರಿಂದ ಅನ್ನ ಸಂತರ್ಪಣೆ, ರಾತ್ರಿ 9.00ರಿಂದ ಶ್ರೀವಾಜಿಲ್ಲಾಯ ದೈವದ ಗಗ್ಗರ ಸೇವೆ, ನೇಮ ಮತ್ತು ಬಂಡಿ ಉತ್ಸವ ನಡೆಯಲಿದೆ ಎಂದ್ರು.

ಈ ಸಂದರ್ಭದಲ್ಲಿ ಕಾರ್ಯಾಧ್ಯಕ್ಷ ಆನಂದ ಸರಿಪಲ್ಲ, ಪೆದಮಲೆ ಗುತ್ತಿನ ನಿಖಿಲ್ ಶೆಟ್ಟಿ, ವಿಶ್ವನಾಥ್ ಕೊಡಿಮಜಲು ಹಾಗೂ ಟ್ರಸ್ಟ್ ಸದಸ್ಯರು ಭಕ್ತಾಧಿಮಾನಿಗಳು ಉಪಸ್ಥಿತರಿದ್ದರು.

Exit mobile version