Site icon Ullalavani

ಕುಂಪಲ ಶ್ರೀ ದುರ್ಗಾ ಪರಮೇಶ್ವರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ

ಕುಂಪಲ ಶ್ರೀ ದುರ್ಗಾ ಪರಮೇಶ್ವರ ‌ಕ್ಷೇತ್ರದಲ್ಲಿ ವರ್ಷಾವದಿ ಶಿವರಾತ್ರಿ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಬೆಂಗಳೂರಿನ ಯುವ ಉದ್ಯಮಿ ಪ್ರಕಾಶ್ ಕುಂಪಲ ರವರು ನೆರವೇರಿಸಿ, ನಮ್ಮ ಹಿರಿಯರ ಕಾಲದಿಂದಲೂ ಕುಂಪಲಕ್ಕೆ ಹಬ್ಬ ಶಿವರಾತ್ರಿ, ಈ ಕ್ಷೇತ್ರದಲ್ಲಿ ಊರಿನ ಜನರನ್ನು ಒಟ್ಟಾಗಿಸುವ, ಧಾರ್ಮಿಕತೆಯನ್ನು ಬೆಳೆಸುವಲ್ಲಿ ಪರಿಣಾಮಕಾರಿಯಾಗಿದೆ. ಕುಂಪಲದ ಊರಿನಲ್ಲಿ ನಡೆಯುವ ಎಲ್ಲಾ ಒಳ್ಳೆಯ ಕಾರ್ಯಕ್ಕೆ ನನ್ನ ಪ್ರೋತ್ಸಾಹ ಯಾವಾಗಲೂ ಇದೆ ಎಂದರು.


ವೇದಿಕೆಯಲ್ಲಿ ಬಿಲ್ಲವ ಸೇವಾ ಸಮಾಜ ಟ್ರಸ್ಟ್ ನ ಅಧ್ಯಕ್ಷ ವೇಣುಗೋಪಾಲ್ ಕೊಲ್ಯ, ಕ್ಷೇತ್ರದ ಪ್ರಧಾನ ಅರ್ಚಕ ಭವಾನಿ ಶಂಕರ ಶಾಂತಿ, ಸೋಮೇಶ್ವರ ಪುರಸಭಾ ಸದಸ್ಯ ಮೋಹನ್ ಶೆಟ್ಟಿ ಕುಂಪಲ, ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಉಪಾಧ್ಯಕ್ಷ ಗಣೇಶ್ ಅಂಚನ್, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಪ್ರಚಾರ ಸಮಿತಿ ಅಧ್ಯಕ್ಷ ಜಗದೀಶ್ ಆಚಾರ್ಯ, ಉಳ್ಳಾಲ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಪ್ರವೀಣ್ ಎಸ್ ಕುಂಪಲ, ನಿವೃತ್ತ ಎ.ಎಸ್ ಐ, ನಾರಾಯಣ ನಾಯರ್, ಮಡಿಲು ಸೇವಾ ತಂಡದ ಅಧ್ಯಕ್ಷ ಗಜೇಂದ್ರ ಪೂಜಾರಿ, ಬಾರ್ದೆ ನಾಗರಿಕ ಸಮಿತಿಯ ಶರತ್ ಬಾರ್ದೆ ಉಪಸ್ಥಿತರಿದ್ದರು.


ಈ ಸಂದರ್ಬದಲ್ಲಿ ಗಡಿನಾಡ ಕಲಾ ಪೋಷಕ ಪ್ರಕಾಶ್ ಕುಂಪಲ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಗಂಗಾದರ ಎಸ್ ಪೂಜಾರಿ, ತಾಲೂಕು ಜಾನಪದ ಪರಿಷತ್ ನೂತನ ಅಧ್ಯಕ್ಷ ಪ್ರವೀಣ್ ಎಸ್ ಕುಂಪಲ ಇವರುಗಳನ್ನು ಸನ್ಮಾನಿಸಲಾಯಿತು. ಸುಕೇಶ್ ಮಂಜನಾಡಿ ನಿರೂಪಿಸಿದರು, ಗೋಪಾಲಕೃಷ್ಣ ರಾವ್ ಲಾಡ್ ವಂದಿಸಿದರು.

Exit mobile version