
ತೌಡುಗೋಳಿ ; ಶ್ರೀ ದುರ್ಗಾದೇವಿ ಕ್ಷೇತ್ರ, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಹಾಗೂ ಪರಿವಾರ ದೈವಗಳ ಸಾನಿಧ್ಯದಲ್ಲಿ ತೌಡುಗೋಳಿ ಶ್ರೀ ದುರ್ಗಾದೇವಿ ಕ್ಷೇತ್ರಕ್ಕೆ ಮಾಣಿಲ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಶಿಲಾನ್ಯಾಸಗೈದರು.
ಬಳಿಕ ಆಶೀರ್ವಚನ ನೀಡಿದ ಶ್ರೀ ಗಳು ಹಿಂದೂ ಸಮಾಜದ ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವ ಕಾಲಘಟ್ಟದಲ್ಲಿ ನಾವಿರುವಾಗ ತೌಡುಗೋಳಿಯಲ್ಲಿ ನಡೆಯುತ್ತಿರುವಂತಹ ಈ ಕ್ಷೇತ್ರದ ಜೀರ್ಣೋದ್ದಾರ ಮಹತ್ವ ಪಡೆದಿದೆ. ಪ್ರತಿಯೊಬ್ಬರೂ ಈ ಪುಣ್ಯಕಾರ್ಯದಲ್ಲಿ ಕೈ ಜೋಡಿಸಿ ಯಶಸ್ವೀಗೊಳಿಸಲು ಕರೆ ನೀಡಿದರು.
ಉದ್ಯಾವರ ಮಾಡ ಅರಸು ಮಂಜಿಷ್ಣಾರ್ ದೈವದ ಅಣ್ಣ ದೈವದ ಪಾತ್ರಿ ರಾಜ ಬೆಳ್ಚಪ್ಪಾಡರು ಮಾತನಾಡಿ ಈ ಕ್ಷೇತ್ರದ ಜೀರ್ಣೋದ್ದಾರ ಕೆಲಸಗಳು ಸಾಂಗವಾಗಿ ನೆರವೇರಿ ಬ್ರಹ್ಮಕಲಶ ನೋಡುವ ಭಾಗ್ಯ ನಮಗೆಲ್ಲರಿಗೂ ಆದಷ್ಟು ಬೇಗ ಸಿಗಲಿ ಎಂದು ಹಾರೈಸಿದರು. ಈ ಸಂಧರ್ಭದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರದ ನಿಧಿ ಸಂಚಯದ ಕೂಪನ್ ಗಳನ್ನು ಮಾಣಿಲ ಶ್ರೀ ಗಳು ದಾನಿಗಳಿಗೆ ನೀಡಿ ಬಿಡುಗಡೆ ಮಾಡಿದರು.
ಧಾರ್ಮಿಕ ಸಭೆಯಲ್ಲಿ ಕ್ಷೇತ್ರದ ಅನುವಂಶೀಯ ಮೊಕ್ತೇಸರ ಗೋವಿಂದ ಗುರುಸ್ವಾಮಿ, ವರ್ಕಾಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಪ್ಪ ಶೆಟ್ಟಿ ಚಾವಡಿಬೈಲು, ನೆತ್ತಿಲ ಶ್ರೀ ಕೃಷ್ಣ ಭಜನಾ ಮಂದಿರದ ಅಧ್ಯಕ್ಷ ಪ್ರೇಮಾನಂದ ರೈ ನೆತ್ತಿಲ, ಶಾಂತಿಪಳಿಕೆ ಕ್ಷೇತ್ರದ ದೈವಸ್ಥಾನದ ಆಡಳಿತ ಮೊಕ್ತೇಸರ ಪಸನ್ನ ಪಕ್ಕಳ ಬಲೆತ್ತೋಡು, ಸಮಾಜ ಸೇವಕ ಹರೀಶ್ ಕನ್ನಿಗುಳಿ, ದೈವ ಪರಿಚಾರಕ ಶಾಂತ ಶೆಟ್ಟಿ, ತಾಲೀಮು ಮಾಸ್ಟರ್ ಮಾಧವ ಶೆಟ್ಟಿ ಬಡಾಜೆ, ನೃತ್ಯ ಶಿಕ್ಷಕ ಆರ್. ಬಿ. ಉದ್ಯಾವರ, ಯಕ್ಷಗಾನ ಭಾಗವತ ಆನಂದ ಎಸ್.. ಸರ್ಕುಡೇಲ್ ಹಾಗೂ ಕಟ್ಟಡ ನಿರ್ಮಾಣ ಮೇಲ್ವಿಚಾರಕ ದಿನೇಶ್ ಕೊಂದಲಕುಮೇರ್ ಉಪಸ್ಥಿತರಿದ್ದರು.
ಪತ್ರಕರ್ತ ಶಿವಪ್ರಸಾದ್ ತೌಡುಗೋಳಿ ಸ್ವಾಗತಿಸಿದರು. ಶಿವರಾಜ್ ತೌಡುಗೋಳಿ, ಸಮಿತಿಯ ಸದಸ್ಯರು ಸಹಕರಿಸಿದರು.