ಕೊಣಾಜೆ: ಉತ್ತಮ ಸಂಸ್ಕಾರದೊಂದಿಗೆ ನಮ್ಮಲ್ಲಿರುವ ಅಜ್ಞಾನದ ಕತ್ತಲೆಯನ್ನು ದೂರಗೊಳಿಸಬೇಕು. ನಾವು ಎಷ್ಟು ದೊಡ್ಡವರಾದರೂ ತಂದೆ ತಾಯಿ ಋಣ ತೀರಿಸಲು ಸಾಧ್ಯವಿಲ್ಲ. ಆದರೆ ಇಂದು ಆಶ್ರಮವಾಸಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಉನ್ನತ ಶಿಕ್ಷಣ ಪಡೆದವರು, ಉತ್ತಮ ಉದ್ಯೋಗದಲ್ಲಿರುವವರ ತಂದೆ ತಾಯಿಗಳೇ ಹೆಚ್ಚಾಗಿ ಆಶ್ರಮ ಸೇರುತ್ತಿರುವುದು ಬೇಸರದ ಸಂಗತಿಯಾಗಿದೆ. ಸಂಸ್ಕಾರವಿಲ್ಲದ ಶಿಕ್ಷಣ, ಉದ್ಯೋಗ ನಮಗೆ ಅಗತ್ಯವಿದೆಯೇ? ಉತ್ತಮ ಸಂಸ್ಕಾರದೊಂದಿಗೆ ತಂದೆ ತಾಯಿಯನ್ನು ಗೌರವಿಸೋಣ ಎಂದು ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ಅವರು ಹೇಳಿದರು.
ಅವರು ಗುಳಿಗ ಕೊರಗಜ್ಜ ಸೇವಾ ಸಮಿತಿ ಅಸೈಗೋಳಿ ಇದರ ಆಶ್ರಯದಲ್ಲಿ ನಡೆಯುವ ಕೋಲೋತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಮಾತೆ, ಪ್ರಕೃತಿ, ಶಕ್ತಿ ನಮ್ಮ ಜೀವನದ ಮಹತ್ತರವಾದ ಪಾತ್ರವಹಿಸುತ್ತದೆ ಎಂದರು.
ದೈವ ಪಾತ್ರಿ ಪ್ರವೀಣ್ ಆಚಾರ್ಯ ಕಾರ್ಯಕ್ರಮ ಉದ್ಘಾಟಿಸಿದರು.
ಕೊಣಾಜೆ ಠಾಣೆ ಉಪನಿರೀಕ್ಷರಾದ ನಾಗಾರಾಜ್ ಅವರು ಮಾತನಾಡಿ, ತಂತ್ರಜ್ಞಾನ ಎಷ್ಡು ಮುಂದುವರಿದರೂ ನಮ್ಮ ಸಂಪ್ರದಾಯ,ಸಂಸ್ಕೃತಿ,ದೈವಾರಾಧನೆಯ ಮಹತ್ವವನ್ನು ಮಕ್ಕಳಿಗೆ ತಿಳಿಯ ಪಡಿಸುವ ಕಾರ್ಯ ಆಗಬೇಕಿದೆ ಎಂದರು.
ಮಂಗಳೂರು ವಿವಿ ಕುಲಸಚಿವ ಪ್ರೊ.ಗಣೇಶ್ ಸಂಜೀವ್ ಅವರು ಮಾತನಾಡಿ, ನಾವು ಮಾಡುವ ಕಾರ್ಯದಲ್ಲಿ ನಂಬಿಕೆಗಳಿದ್ದರೆ ಮಾತ್ರ ಯಶಸ್ಸು ಸಿಗುತ್ತದೆ. ಪ್ರತಿಯೊಂದು ಕೆಲಸದ ಔಚಿತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ರವೀಂದ್ರ ರೈ ಕಲ್ಲಿಮಾರ್ ಅವರು ಮಾತನಾಡಿ ಪ್ರತಿಯೊಬ್ಬರೂ ನಂಬಿಕೆ ಅಗತ್ಯ. ಕಲಾ ಮಾಧ್ಯಮಗಳು ನಮಗೆ ಸಂಸ್ಕಾರವನ್ನು ನೀಡಿ ಉನ್ನತಿಯತ್ತ ಕೊಂಡೊಯ್ಯುತ್ತದೆ ಎಂದರು.
ಗುಳಿಗಜ್ಜ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರಾದ ಭಾಸ್ಕರ ಕೆ ಗುಡ್ಡೆಮಾರ್ ಅವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ವಿವಿದ ಕ್ಷೇತ್ರದ ಸಾಧಕರಾದ ವಂಶೀ ರತ್ನ ಕುಮಾರ್, ಬಾಬು ಮೊಂಟೆಪದವು, ಆನಂದ ಪುಲ್ಲು, ಆದ್ಯ ಭೋವಿ, ರಿತಿಷಾ ಕೆಜೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶೈಕ್ಷಣಿಕ ಸಾಧಕರಾದ ಸುಚಿತಾ ದೇವಾಡಿಗ, ತೃಷಾ, ಭೂಮಿಕಾ, ಪ್ರತೀಕ್ಷಾ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೀತಾ ದಾಮೋದರ್ ಕುಂದರ್ , ಮುಖಂಡರಾದ ರವಿ ರೈ ಪಜೀರು, ಶ್ರೀನಿವಾಸ ಶೆಟ್ಟಿ ಪುಲ್ಲು, ಪಟ್ಟೋರಿ ಶ್ರೀ ನಾಗಬ್ರಹ್ಮ ಭಜನಾ ಮಂಡಳಿಯ ಅಧ್ಯಕ್ಷರಾದ ದಿನೇಶ್ ಕುಲಾಲ್ ಕಲಾಯಿ, ಜೈ ಶ್ರೀರಾಮ ಫ್ರೆಂಡ್ಸ್ ಸರ್ಕಲ್ ಕಕ್ಕೆಮಜಲು ಇದರ ಅಧ್ಯಕ್ಣರಾದ ಚೇತನ್, ಬೇಬಿಂದ್ರ ಬರಿಕೆ, ಹೇಮಂತ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಸಂದೀಪ್ ಅಂಚನ್ ಅವರು ಸ್ವಾಗತಿಸಿದರು. ಪ್ರೇಮದಾಸ್ ಕರ್ಕೇರ ವಂದಿಸಿದರು. ಸುಮನಾ ಗಿರೀಶ್ ಪ್ರಶಸ್ತಿ ಪತ್ರ ವಾಚಿಸಿದರು. ಪ್ರತಾಪ್ , ಯೋಗೀಶ್ ಮಲ್ಲಿಗೆ ಮಾಡು ನಿರೂಪಿಸಿದರು.
ಬಳಿಕ ಸ್ಥಳೀಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
