ಉಳ್ಳಾಲ: ಫೆ.1 ರಿಂದ 6 ರ ತನಕ ತೊಕ್ಕೊಟ್ಟು ಕಾಪಿಕಾಡುವಿನ ಶ್ರೀ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಜರುಗಲಿದ್ದು ಆ ಪ್ರಯುಕ್ತ ಭಾನುವಾರದಂದು ಕಲ್ಲಾಪು,ಕೆರೆಬೈಲು ಶ್ರೀ ನಾಗನ ಕಟ್ಟೆಯಿಂದ ಶ್ರೀ ಕ್ಷೇತ್ರದ ಕಡೆಗೆ ಹೊರಟ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆಗೆ ಉಳ್ಳಾಲ ಬಂಡಿಕೊಟ್ಯ ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸುಂದರ್ ಉಳ್ಳಾಲ್ ಚಾಲನೆ ನೀಡಿದರು.
ಈ ವೇಳೆ ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಪ್ರಧಾನ ಅರ್ಚಕರಾದ ಪರಮೇಶ್ವರ ಜೋಷಿ,ಕೊಲ್ಯ ಶ್ರೀ ನಾಗಬ್ರಹ್ಮ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಭಾಸ್ಕರ ಐತಾಳ್,ಉಮಾಮಹೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಎ.ಜೆ.ಶೇಖರ್,ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ.ಅತ್ತಾವರ,ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಸತೀಶ್ ಕುಂಪಲ,ಕಾರ್ಯಾಧ್ಯಕ್ಷರಾದ ಸುರೇಶ್ ಭಟ್ನಗರ,ಗೌರವ ಸಲಹೆಗಾರರಾದ ಕೆ.ಟಿ.ಸುವರ್ಣ,ಕೃಷ್ಣ ಶಿವಕೃಪಾ ಕುಂಜತ್ತೂರು,ಉಪಾಧ್ಯಕ್ಷರಾದ ಚಂದ್ರಹಾಸ್ ಪಂಡಿತ್ ಹೌಸ್,ಸತೀಶ್ ಕರ್ಕೇರ,ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಾಪಿಕಾಡು,ಕ್ಷೇತ್ರದ ಮೊಕ್ತೇಸರರಾದ ಡಾ.ರಾಮಕೃಷ್ಣ ಶೆಟ್ಟಿ,ರಘುರಾಮ ಶೆಟ್ಟಿ,ಕೂಸಪ್ಪ ಗಟ್ಟಿ,ನಿರ್ಮಲಾ ಕುಂಙಬು,ಹೊರೆ ಕಾಣಿಕೆ ಸಮಿತಿ ಅಧ್ಯಕ್ಷರಾದ ರವಿಶಂಕರ್ ಸೋಮೇಶ್ವರ,ಪ್ರಚಾರ ಸಮಿತಿ ಅಧ್ಯಕ್ಷರಾದ ಜಗದೀಶ್ ಆಚಾರ್ಯ,
ಉಮಾಮಹೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರಾದ ದಿನೇಶ್ ರೈ ಕಳ್ಳಿಗೆ,ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್,ಕಿನ್ಯ ಬೆಳರಿಂಗೆ ಶ್ರೀ ಮಲರಾಯ ಬಂಟ ದೈವಸ್ಥಾನ ಭಂಡಾರ ಮನೆಯ ಆಡಳಿತ ಮೊಕ್ತೇಸರರಾದ ಬಾಬು ಶಾಸ್ತ ಕಿನ್ಯ,ಮಾಜಿ ವಿದಾನಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ, ಶ್ರೀ ಕ್ಷೇತ್ರ ಸೋಮನಾಥ ಉಳಿಯದ ಗಡಿ ಪ್ರಧಾನರಾದ ಬಸಪ್ಪ ಗುರಿಕಾರ ಯಾನೆ ಜೆ.ರವೀಂದ್ರ ನಾಯಕ್,ಭಟ್ನಗರ ಶ್ರೀ ಜೈ ವೀರ ಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಪುರುಷೋತ್ತಮ ಗಟ್ಟಿ ,ಕಾಪಿಕಾಡು ಶ್ರೀ ಬಬ್ಬು ಸ್ವಾಮಿ ದೈವಸ್ಥಾನದ ಗುರಿಕಾರರಾದ ರಾಜುಕುಮಾರ್ ,ಕೊಲ್ಯ ಶಾರದಾ ಟ್ರಸ್ಟ್ ನ ಅಧ್ಯಕ್ಷರಾದ ಮೋಹನ್ ಶೆಟ್ಟಿ ಕುಂಪಲ,ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷರಾದ ಯಶವಂತ ಅಮೀನ್,ದೇರಳಕಟ್ಟೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಚಂದ್ರಹಾಸ್ ಅಡ್ಯಂತಾಯ,ಚೆಂಬುಗುಡ್ಡೆ ಮಹಾಂಕಾಳಿ ದೈವಸ್ಥಾನದ ಅಧ್ಯಕ್ಷರಾದ ಹರೀಶ್ಚಂದ್ರ ಕಾಪಿಕಾಡು,ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಶೆಟ್ಟಿ,ತಲಪಾಡಿ ಶ್ರೀ ಅವಿನಾಶಿ ಮಹಾದೇವ ಭಜನಾ ಮಂದಿರದ ಅಧ್ಯಕ್ಷರಾದ ಯುವರಾಜ್ ದೇವಿಪುರ,ಕಾಪಿಕಾಡು ಶ್ರೀ ಮಂತ್ರದೇವತಾ ಕೊರಗಜ್ಜ ಸಾನಿಧ್ಯದ ಧರ್ಮದರ್ಶಿಗಳಾದ ಪ್ರಶಾಂತ್ ಕಾಪಿಕಾಡು,ಓವರ್ ಬ್ರಿಡ್ಜ್ ಶ್ರೀ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರಾದ ರಾಜೇಶ್ ಕಾಪಿಕಾಡು,ಓವರ್ ಬ್ರಿಡ್ಜ್ ಶ್ರೀ ಗಣೇಶ ಮಂದಿರದ ಅಧ್ಯಕ್ಷರಾದ ಸತೀಶ್ ಗಟ್ಟಿ,ತೊಕ್ಕೊಟ್ಟು ನಿತ್ಯಾನಂದ ಯುವಕ ಮಂಡಲದ ಅಧ್ಯಕ್ಷರಾದ ಲೋಕನಾಥ ಗಟ್ಟಿ,ಬಂಡಿಕೊಟ್ಯ ಪುನ್ಕೆದಡಿ ಕೋರ್ದಬ್ಬು ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸಂತೋಷ್ ಉಳ್ಳಾಲ,ಕೆರೆಬೈಲ್ ಶ್ರೀ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರವೀಣ್ ರೈ,ಕೊಂಡಾಣ ಪಿಲಿಚಾಮುಂಡಿ ದೈವಸ್ಥಾನದ ಗುರಿಕಾರರಾದ ಮುತ್ತಣ್ಣ ಶೆಟ್ಟಿ ಕೋಟೆಕಾರ್,ಪ್ರಮುಖರಾದ ಚಂದ್ರಶೇಖರ ಉಚ್ಚಿಲ್,ಬಾಲಕೃಷ್ಣ ಶೆಟ್ಟಿ ಉಳ್ಳಾಲಗುತ್ತು ಮೊದಲಾದವರು ಉಪಸ್ಥಿತರಿದ್ದರು.
ಜೀವನ್ ಕುಮಾರ್ ತೊಕ್ಕೊಟ್ಟು ನಿರೂಪಿಸಿದರು.