ಉಳ್ಳಾಲ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ದಿಯ ಹಿನ್ನೆಲೆಯಲ್ಲಿ ದೇಶದಾದ್ಯಂತ ಹಿಂದೂ ಸಂಗಮ ಕಾರ್ಯಕ್ರಮ ಆಯೋಜನೆಯ ಭಾಗವಾಗಿ ಮಂಗಳೂರಿನ ಉಳ್ಳಾಲ ತಾಲೂಕಿನ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮ ಉಳ್ಳಾಲ ಚೋಟ ಮಂಗಳೂರಿನ ಐಸ್ ಪ್ಲಾಂಟ್ ಬಳಿ ನಡೆಯಿತು.
ಉಳ್ಳಾಲದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ವೈಭವದೊಂದಿಗೆ ಒಂದು ಮಹತ್ವದ ಕಾರ್ಯಕ್ರಮವಾಗಿ ಹಿಂದು ಸಂಗಮ ಆಯೋಜನಾ ಸಮಿತಿ ಉಳ್ಳಾಲ ತಾಲೂಕು ವತಿಯಿಂದ ಈ ಅದ್ದೂರಿ ಸಮಾವೇಶ ನಡೆದಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವೈದ್ಯರಾದ ಡಾ.ಸದಾಶಿವ ಪೊಲ್ನಾಯ ವಹಿಸಿದ್ದರು. ಸಮಾವೇಶದ ದಿಕ್ಕೂಚಿ ಭಾಷಣವನ್ನ ಕ್ಯಾಂಪ್ಕೋ ಅಧ್ಯಕ್ಷರಾದ ಸತೀಶ್ ಚಂದ್ರ ಮಾಡಿದ್ದು, ಸಮಾವೇಶದ ಉದ್ದೇಶ ಹಾಗೂ ಹಿಂದೂ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಿದ್ರು.
ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರ ಉಳಿಯ ಇದರ ಧರ್ಮದರ್ಶಿಗಳಾದ ದೇವು ಮೂಲ್ಯಣ್ಣ, ಅರ್ಟ್‌ಆಫ್ ಲಿವಿಂಗ್ ಶಿಕ್ಷಕಿ ಶ್ರೀಮತಿ ಸುಮನಾ ಕಾಮತ್, ಹಿಂದೂ ಸಂಗಮ ಆಯೋಜನಾ ಸಮಿತಿ, ಉಳ್ಳಾಲ ತಾಲೂಕು ಇದರ ಗೌರವಾಧ್ಯಕ್ಷ ಸುದೇಶ್ ಮರೋಳಿ ಹಾಗೂ ಹಿಂದೂ ಸಂಗಮ ಆಯೋಜನಾ ಸಮಿತಿ ಉಳ್ಳಾಲ ತಾಲೂಕು ಇದರ ಉಪಾಧ್ಯಕ್ಷ ರಾಜೇಶ್ ಬಂಗೇರ ಉಪಸ್ಥಿತರಿದ್ದರು. ಹಲವು ಸಾಂಸ್ಕೃತಿಕ ವೈಭವದ ಜೊತೆ ಹಿಂದೂ ಸಂಗಮ ಅದ್ದೂರಿಯಾಗಿ ನಡೆದಿದ್ದು, ಸಾವಿರಾರು ಕಾರ್ಯಕರ್ತರು ಹಾಗೂ ನಾಯಕರು ಭಾಗಿಯಾಗಿದ್ದರು