Site icon Ullalavani

ಲಯನ್ಸ್ ಕ್ಲಬ್ ಸೋಮೇಶ್ವರದ ವತಿಯಿಂದ ದೇಹದಾರ್ಢ್ಯ ತರಬೇತುದಾರರು ಮತ್ತು ಯೋಗಶಿಕ್ಷಕರಿಗೆ ಗೌರವಾರ್ಪಣೆ

ಸೋಮೇಶ್ವರ; ಲಯನ್ಸ್ ಕ್ಲಬ್ ಆಫ್ ಸೋಮೇಶ್ವರ ಆಯೋಜಿಸಿದ ಝೋನ್ ಸಾಮಾಜಿಕ ಸಭೆಯ ಸಂದರ್ಭದಲ್ಲಿ, ಆರೋಗ್ಯಕರ ಮತ್ತು ಸದೃಢ ಸಮಾಜ ನಿರ್ಮಾಣಕ್ಕೆ ಸ್ವಾರ್ಥರಹಿತವಾಗಿ ಸೇವೆ ಸಲ್ಲಿಸುತ್ತಿರುವ ದೇಹದಾರ್ಢ್ಯ ತರಬೇತುದಾರರು ಹಾಗೂ ಯೋಗ ಶಿಕ್ಷಕರನ್ನು ಗೌರವಿಸಲಾಯಿತು. ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವಲ್ಲಿ ಅವರ ಪಾತ್ರವನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪ್ರಶಂಸಿಸಲಾಯಿತು.

ಲಯನ್ ವಿಜಯಕುಮಾರ್, ಲಯನ್ ಶಶಿ ಕುಮಾರ್ ನಾಯರ್, ಲಯನ್ ನಿರ್ಮಿತಾ ಭಂಡಾರಿ ಹಾಗೂ ಲಯನ್ ರಾಜಶ್ರೀ ನಾಯರ್ ಅವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಲಯನ್ ವಿಜಯನ್ ಕೆ, ಅಧ್ಯಕ್ಷರು, ಲಯನ್ಸ್ ಕ್ಲಬ್ ಸೋಮೇಶ್ವರ ವಹಿಸಿದ್ದರು. ರಿಜನ್ 5 ರ ರೀಜನಲ್ ಚೇರ್‌ಪರ್ಸನ್ ಲಯನ್ ಮಲ್ಲಿಕಾ ಭಂಡಾರಿ ಮುಖ್ಯ ಅತಿಥಿಯಾಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಝೋನ್ 1 ರ ಚೇರ್‌ಪರ್ಸನ್ ಲಯನ್ ಜೆಸಿಂತ ಮೆಂಡೋನ್ಸ, ಕ್ಲಬ್ ಎಕ್ಸ್‌ಟೆನ್ಶನ್ ಆಫೀಸರ್ ಲಯನ್ ಭಾರತಿ ವಿನೋದ್ ಶೆಟ್ಟಿ ಹಾಗೂ ಕಾರ್ಯದರ್ಶಿ ಲಯನ್ ರಾಜಶ್ರೀ ನಾಯರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕ್ಲಬ್ ಉಪಾಧ್ಯಕ್ಷ ಲಯನ್ ವಿಜಯಕುಮಾರ್ ಕೆ ಸಭಿಕರನ್ನು ಸ್ವಾಗತಿಸಿದರು. ಖಜಾಂಚಿ ಲಯನ್ ನಿತೀಶ್ ಕೃಷ್ಣ ವಂದನಾರ್ಪಣೆ ಸಲ್ಲಿಸಿದರು.

Exit mobile version