ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರಿ ಕ್ಷೇತ್ರದಲ್ಲಿ ಫೆ.1ರಿಂದ 6ರವರೆಗೆ ನಡೆಯಲಿರುವ ಅಷ್ಠಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಭಕ್ತರಿಗೆ ಹೊರೆಕಾಣಿಕೆ ಸಮರ್ಪಣೆಗೆ ಅನುಕೂಲವಾಗಲು ತೊಕ್ಕೋಟ್ಟು ಜೈ ವೀರಮಾರುತಿ ವ್ಯಾಯಾಮ ಶಾಲೆಯ ಆವರಣದಲ್ಲಿ ಹೊರೆಕಾಣಿಕೆ ಕೇಂದ್ರವನ್ನು ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ ಶೇಖರ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮತ್ತು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ಎಲ್ಲಾ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹಸಿರು ಹೊರೆಕಾಣಿಕೆ ತೊಕ್ಕೋಟ್ಟಿನ ವೀರಮಾರುತಿ ವ್ಯಾಯಾಮ ಶಾಲೆಯಿಂದಲೇ ಆರಂಭಗೊoಡಿದ್ದು, ಹಾಗೂ ಎಲ್ಲವೂ ಯಶಸ್ವಿಯಾಗಿದೆ, ನಮ್ಮ ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರಿ ಕ್ಷೇತ್ರದ ಅಷ್ಠಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಹಸಿರು ಹೊರೆಕಾಣಿಕೆಯ ಕೇಂದ್ರವನ್ನು ಇಲ್ಲಿ ಉದ್ಘಾಟಿಸಿದ್ದೇವೆ, ಇದು ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭ ದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಭಟ್ನಗರ , ಪ್ರಧಾನ ಕಾರ್ಯದರ್ಶಿ ಗೋಪಿನಾಥ್ ಕಾಪಿಕಾಡ್ , ವೀರಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಪುರುಷೋತ್ತಮ ಗಟ್ಟಿ , ಬುರ್ದುಗೊಳಿ ಕಲ್ಲಾಪಿನ ಅಧ್ಯಕ್ಷರಾದ ವಿಶ್ವನಾಥ್ ನಾಯಕ್ , ಕ್ಷೇತ್ರದ ಟ್ರಸ್ಟಿ ಗಳಾದ ರಘುರಾಮ್ ಶೆಟ್ಟಿ , ಡಾ ಆರ್ ಕೆ ಶೆಟ್ಟಿ , ನಿರ್ಮಲ ಕುಂಜoಬು , ಸೇವಾ ಸಮಿತಿ ಅಧ್ಯಕ್ಷರಾದ ದಿನೇಶ್ ರೈ ಕಳ್ಳಿಗೆ ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್ , ದರ್ಮದರ್ಶಿ ಪ್ರಶಾಂತ್ ಕಾಪಿಕಾಡ್ , ಸುರೇಂದ್ರ ಶೆಟ್ಟಿ ಮಂಚಿಲ ಗುತ್ತು , ಶಾಲೆಯ ಪ್ರಧಾನ ಶಿಕ್ಷಕರಾದ ಜಯಣ್ಣ , ರವಿ ಶಂಕರ್ ಸೋಮೇಶ್ವರ, ದಿನೇಶ್ ಕಾಜವ , ಭಾಸ್ಕರ ಗಟ್ಟಿ ,ಆಡಳಿತ ಮಂಡಳಿ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು ,ಸದಸ್ಯರು ಹಾಗೂ ಕ್ಷೇತ್ರದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರ್ವಹಿಸಿದರು