Site icon Ullalavani

ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆಯ ನೂತನ ಅಧ್ಯಕ್ಷರಾಗಿ ಸುನಿಲ್ ತೇವುಲ, ಕಾರ್ಯದರ್ಶಿಯಾಗಿ ಕಿಶನ್ ಕುಲಾಲ್ ಆಯ್ಕೆ

ಉಳ್ಳಾಲ: ಶ್ರೀ ಜೈ ವೀರಾಂಜನೇಯ ವ್ಯಾಯಾಮ ಶಾಲೆಯ 41ನೇ ವಾರ್ಷಿಕ ಮಹಾಸಭೆ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಜಯರಾಮ್ ಕುತ್ತಾರ್ ಇವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ಸಂಸ್ಥೆಯ ವಾರ್ಷಿಕ ಚಟುವಟಿಕೆಗಳ ಬಗ್ಗೆ ವಿಮರ್ಶೆ ನಡೆಸಿ, 2026ರ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಬಳಿಕ 21 ಜನರ ನೂತನ ಸಮಿತಿ ಹಾಗೂ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಗೌರವ ಅಧ್ಯಕ್ಷರಾಗಿ ಗಣೇಶ್ ಟೈಲರ್ ಹಾಗೂ ಅಧ್ಯಕ್ಷರಾಗಿ ಸುನಿಲ್ ತೇವುಲ ಅವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಸ್ವೀಕೃತ್ ಕುತ್ತಾರ್ ಮತ್ತು ಗುರುರಾಜ್ ಹೊಸಮನೆ, ಕಾರ್ಯದರ್ಶಿಯಾಗಿ ಕಿಶನ್ ಕುಲಾಲ್, ಜೊತೆ ಕಾರ್ಯದರ್ಶಿಯಾಗಿ ದಿವ್ಯರಾಜ್ ಕುತ್ತಾರ್, ಕೋಶಾಧಿಕಾರಿಯಾಗಿ ಸೃಜನ್ ದೆಸೋಡಿ ಆಯ್ಕೆಯಾದರು.

ಕ್ರೀಡಾ ಕಾರ್ಯದರ್ಶಿಗಳಾಗಿ ಶ್ರಾವಣ್ ತೇವುಲ, ನಿಶಾಂತ್ ಆಯರೆಬೆಟ್ಟು ಮತ್ತು ವರ್ಷಿತ್ ಆಯರೆಬೆಟ್ಟು ಆಯ್ಕೆಗೊಂಡರೆ, ಪೂಜಾ ಸಂಚಾಲಕರಾಗಿ ದಿವ್ಯರಾಜ್ ತೇವುಲ ಹಾಗೂ ಕವನ್ ಆಯರೆಬೆಟ್ಟು ಇವರನ್ನು ಆಯ್ಕೆ ಮಾಡಲಾಯಿತು.

Exit mobile version